ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೂಡ್ಲಿಗಿ:” ಅದ್ಧೂರಿಯಾಗಿ ಜರುಗಿದ ಶ್ರೀ ಕೊತ್ತಲಾಂಜನೇಯ ರಥೋತ್ಸವ”

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆರಾಧ್ಯ ದೈವ ಶ್ರೀಕೊತ್ತಲಾಂಜನೇಯ ಸ್ವಾಮಿ ರಥೋತ್ಸವ, ರಾಮ ನವಮಿ ದಿನದಂದು ಸಂಜೆ ಬಹು ವಿಜೃಂಭಣೆಯಿಂದ ಜರುಗಿತು. ಕಳೆದ ಮೂರು ದಿನಗಳಿಂದಲೂ ರಥೋತ್ಸವ ನಿಮಿತ್ತ ಜರುಗುವ, ಪೂರ್ವ ಧಾರ್ಮಿಕ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದವು. ಅಂದು ಮುಂಜಾನೆಯಿಂದಲೇ ಪಟ್ಟಣದಾದ್ಯಂತ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ, ಮಕ್ಕಳ ಆಟಿಕೆಗಳ ಮಾರಾಟದ ಅಂಗಡಿಗಳಿದ್ದು, ಜಾತ್ರೆಯ ಸೊಬಗು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತರ ದಂಡು ಸಂಚರಿಸುವುದರಿಂದಾಗಿ, ರಥೋತ್ಸವಕ್ಕೆೆ ಮತ್ತಷ್ಟು ಮರೆಗು ನೀಡಿತ್ತು. ಇದಕ್ಕೂ ಮುನ್ನ ದಿನಗಳಲ್ಲಿ ಬಸವ ಉಚ್ಚಯ್ಯ ಉತ್ಸವ, ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ನಂತರದ ದಿನ ರಥೋತ್ಸವದಂದು ಬೆಳಿಗ್ಗೆ, ಸ್ಥಳೀಯ ವೈದಿಕ ಬ್ರಾಹ್ಮಣ ಸಮುದಾಯದವರಿಂದ. ರಥೋತ್ಸವ ಪ್ರಯುಕ್ತ ಯಜ್ಞಾದಿ ಪೂಜೆಗಳು ಜರುಗಿಸಿ, ಬ್ರಾಹ್ಮಣರ ನೇತೃತ್ವದಲ್ಲಿ ಮಡಿ ತೇರು ಎಳೆಯಲಾಯಿತು.
ಸತತ 2ನೇ ಬಾರಿಗೆ ಪಟ ಪಡೆದ ಭಜರಂಗಿ ಭಕ್ತ ಎನ್.ಬಿ.ಸುನೀಲ ಕುಮಾರ ರಥೋತ್ಸವ ಪ್ರಾರಂಭದಲ್ಲಿ, ಹಿಂದಿನ ವರ್ಷದ ರಥೋತ್ಸವದಲ್ಲಿ ಪಟ ಪಡೆದಿದ್ದ ಪಟ್ಟಣದ ವಾಲ್ಮೀಕಿ ಸಮುದಾಯದ ಯುವ ಮುಖಂಡ ಹಾಗೂ ಗುತ್ತಿದಾರರಾದ ಎನ್.ಬಿ.ಸುನೀಲ ಕುಮಾರವರು ದೇವಸ್ಥಾನಕ್ಕೆ ಪಟದ ಹಣ 8,01,101ರೂಗಳನ್ನು (ಎಂಟು ಲಕ್ಷದ ಒಂದು ಸಾವಿರದ ಒಂದು ನೂರ ಒಂದು ರೂಗಳು) ಸಂದಾಯ ಮಾಡಿ ಸಮರ್ಪಿಸಿದರು, ನಂತರ ಪಟ ಹರಾಜು ಪ್ರಕ್ರಿಯೆ ಜರುಗಿತು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕರವರ ನೇತೃತ್ವದಲ್ಲಿ, ದೇವಸ್ಥಾನದ ಆಯಗಾರರು ಸಮಿತಿಯವರು ಪಟ ಹರಾಜು ಕೂಗೋ ಹಾಗೂ ಇತರೆ ಪ್ರಕ್ರಿಯೆಯನ್ನು ನಿರ್ವಹಿಸಿದರು. ಈ ಬಾರಿಯೂ ಕೂಡ ಅಂದರೆ ಸತತ ಎರೆಡನೇ ಬಾರಿಗೆ, ಎನ್.ಬಿ.ಸುನೀಲ ಕುಮಾರವರು. 4,01,101ರೂ(ನಾಲ್ಕು ಲಕ್ಷ ಒಂದು ಸಾವಿರ ನೂರ ಒಂದು ರೂಗಳು) ಗಳಿಗೆ ಪಟ ಪಡೆದುಕೊಂಡರು, ಪಟವನ್ನು ಅವರ ಮನೆ ನಿಯಮದಂತೆ ಕಳುಹಿಸಿಕೊಡಲಾಯಿತು. ಸಮ್ಮಾಳ ಡೊಳ್ಳು ಹಲಗೆ ವಾಧ್ಯ ವೃಂದದವರು , ತಮ್ಮ ಕಲೆ ಪ್ರದರ್ಶನ ಮಾಡಿ ನೆರದವರನ್ನು ರಂಜಿಸಿದರು ಮತ್ತು ಉತ್ಸವಕ್ಕೆ ಮೆರೆಗು ತುಂಬಿದರು. ಮಕ್ಕಳಾದಿಯಾಗಿ ಮಹಿಳೆಯರು, ಸಾವಿರಾರು ಯುವಕ ಯುವತಿಯರು, ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರೊಳಗೊಂಡು, ಅಸಂಖ್ಯಾತ ಭಕ್ತರು ಶ್ರದ್ಧೆ ಭಕ್ತಿಯಿಂದ ದೇವರ ರಥೊತ್ಸದಲ್ಲಿ ಪಾಲ್ಗೊಂಡಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ