ಯಾದಗಿರಿ/ ಗುರುಮಠಕಲ್: ಇಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪಬ್ಲಿಕ್ ಶಾಲಾ ಮಕ್ಕಳಿಂದ ಸರಕಾರಿ ಮಹಾ ವಿದ್ಯಾಲಯ ಗುರುಮಠಕಲ್ ಮುಂಭಾಗದ ಖಾಲಿ ಗೋಡೆಗೆ ಶಾಲಾ ಮಕ್ಕಳಿಂದ ಶ್ರೀ ಮೇಘನಾಥ ಅಬ್ರಾಹಿಂ ಬೆಳ್ಳಿ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯ ಚಿತ್ರಕಲಾ ಶಿಕ್ಷಕರ ನೇತೃತ್ವದಲ್ಲಿ ಮಕ್ಕಳು ಚಿತ್ರ ಬಿಡಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಮಾರಪ್ಪ ನಾಯಕ ಅಬೇಕಸ್ ತರಬೇತಿದಾರರು, ಶ್ರೀಮತಿ ವಿನಿತಾ ಶಿಕ್ಷಕರು, ಶ್ರೀ ಅನಿಲ ಕುಮಾರ್ ಎಲಮೇಲ, ನಿಲೋಫಾರ್ ಮಕ್ಕಳಿಗೆ ಬಣ್ಣ ಹಾಕಲು ಸಹಕರಿಸಿದರು, ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್
