ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಆರ್ ಇ ಇಂಡಿಪೆಂಡೆಟ್ ಪಿಯು ಕಾಲೇಜು ಉತ್ತಮ ಫಲಿತಾಂಶದ ಮೂಲಕ ಶೈಕ್ಷಣಿಕ ಸಾಧನೆ ಮಾಡಿ ಕಲಬುರಗಿ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗುತ್ತಿದೆ ಎಂದು ಪಾಲಕ ಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದರು.
2024-25 ನೇ ಸಾಲಿನ ದ್ವಿತಿಯ ಪಿಯು ಫಲಿತಾಂಶಗಳ ವಿವರ ಹೀಗಿವೆ
ಕಲಾ ವಿಭಾಗದಲ್ಲಿ ಶಮಿನಾ ಶರ್ಮುದ್ದೀನ ಚಿಗರಳ್ಳಿ ಪ್ರತಿ ಶತ 97.66% ಅರುಣಕುಮಾರ ಸಿದ್ದಣ್ಣ ಗೌನಳ್ಳಿ ಪ್ರತಿ ಶತ 93.16 ಜ್ಯೋತಿ ಮಲ್ಲಿಕಾರ್ಜುನ ಕವಲಗಾ ಬಿ ಪ್ರತಿ ಶತ 91.33% ಅದೇ ರೀತಿಯಾಗಿ ವಾಣಿಜ್ಯ ಕ್ಷೇತ್ರದಲ್ಲಿ ಭಾವನ ಶಾಂತಪ್ಪ ಜೇವರ್ಗಿ ಪ್ರತಿ ಶತ 88.16%; ಶಿವಾನಂದ ಚನ್ನಬಸಪ್ಪ ಹರವಾಳ ಪ್ರತಿಶತ 87.6% ಸಂಗಮೇಶ ಈರಣ್ಣ ಆಂದೋಲಾ ಪ್ರತಿ ಶತ 87.5 % ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೀನಾಕ್ಷಿ ಅರ್ಜುನ ರಾಠೋಡ ಪ್ರತಿಶತ 97.66 % ದಿವ್ಯಾ ಪೋಮು ಪವಾರ ಗೂಗಿಹಾಳ 96.66 % ಮನೋಜಕುಮಾರ ಸಿದ್ದಪ್ಪ 95% ಗಳಿಸಿದ್ದಾರೆ.
ಪ್ರಮುಖವಾಗಿ ಕುಮಾರಿ ಸಮೀನಾ ಕಲಾ ವಿಭಾಗದಲ್ಲಿ 97.66 % ಪಡೆದು ಕಲಬುರಗಿ ಜಿಲ್ಲೆಗೆ ಮೂರನೇ ರ್ಯಾಂಕ್ ಪಡೆದು, ಜೇವರ್ಗಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ ಅದೇ ರೀತಿಯಾಗಿ ವಿಜ್ಞಾನ ವಿಭಾಗದಲ್ಲಿ ಕುಮಾರಿ ಮೀನಾಕ್ಷಿ 97.66 % ಪಡೆದು ಕಲಬುರಗಿ ಜಿಲ್ಲೆಯಲ್ಲಿಯೇ ಆರನೇ ರ್ಯಾಂಕ್ ಪಡೆದು ಜೇವರ್ಗಿ ತಾಲೂಕಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಒಟ್ಟು 51 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 205 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ಹಾಗು ನಿರ್ದೇಶಕರಾದ ಸಂಜಯ ಪವಾರ್ ಹಾಗೂ ರಾಮು ಪವಾರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಶುಭ ಹಾರೈಸಿದರು.
ವರದಿಃ ಚಂದ್ರಶೇಖರ ಪಾಟೀಲ್
