ಬಳ್ಳಾರಿ / ಕಂಪ್ಲಿ : ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಮೂಲದ ಚಿಂದಬರಂ ಮೃತಪಟ್ಟವರು.
ಸಣಾಪುರ ರಸ್ತೆಯ ಮಟ್ಟಿ ಬಳಿ ದುರ್ಘಟನೆ ನಡೆದಿದೆ, ಮೃತ ವ್ಯಕ್ತಿ ನಂಬರ್ 02 ಮುದ್ದಾಪುರ ಗ್ರಾಮದಲ್ಲಿ ಬಾತುಕೋಳಿ ಸಾಕಾಣಿಕೆ ಮಾಡುತ್ತಿದ್ದು ಬೈಕ್ ನಿಂದ ಬಿದ್ದ ರಭಸಕ್ಕೆ ತಲೆ ಹೊಡೆದು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಂಪ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ.
