ಬಳ್ಳಾರಿ / ಕಂಪ್ಲಿ : ಸ್ಥಳೀಯ ಜೆಸ್ಕಾಂ ಕಛೇರಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಯಮಿತ ನೌಕರರ ಸಂಘದ 2025-28ನೇ ಸಾಲಿನ ಕಂಪ್ಲಿ ಪ್ರಾಥಮಿಕ ಸಮಿತಿಯ ಏಳು ಪ್ರಾಥಮಿಕ ಪ್ರತಿನಿಧಿಗಳ ಸ್ಥಾನಗಳಿಗೆ ಬುಧವಾರ ಚುನಾವಣೆ ಜರುಗಿತು.
ಈ ಚುನಾವಣೆಯ ಅಖಾಡದಲ್ಲಿ 14 ಜನ ಸ್ಪರ್ಧಿಸಿದ್ದರು. ಒಟ್ಟು 65 ಜನ ಮತದಾರರು ಮತಗಳನ್ನು ಚಲಾಯಿಸಿದರು. ತದ ನಂತರದ ಫಲಿತಾಂಶದಲ್ಲಿ ಡಿ.ಶ್ರೀನಿವಾಸಪ್ಪ(42 ಮತ), ಎಂ.ದೊಡ್ಡಬಸಪ್ಪ(41), ಟಿ.ಹೊನ್ನೂರಸ್ವಾಮಿ(41), ರಾಮಾಂಜಿನಿ(40), ಕೆ.ನಾಗರಾಜ(37), ಎನ್.ಉಮೇಶ(40), ಎನ್.ವೆಂಕಟಾಚಲ(37) ಇವರು ಜಯಶಾಲಿಗಳಾಗಿ ಹೊರ ಹೊಮ್ಮಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ರುದ್ರಪ್ಪ ತಿಳಿಸಿದರು.
ತದನಂತರ ನೂತನ ಪ್ರಾಥಮಿಕ ಪ್ರತಿನಿಧಿಗಳು ವಿಜಯೋತ್ಸವ ಆಚರಿಸಿದರು. ಇಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಜೊತೆಗೆ ತಮಟೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ಎನ್.ಮಾರುತಿ, ಎಇಇ ಮಲ್ಲಿಕಾರ್ಜುನ ಸೇರಿದಂತೆ ಸಿಬ್ಬಂದಿ ಹಾಗೂ ನೌಕರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
