ಯಾದಗಿರಿ: ಇಂದು ಗುರುಮಠಕಲ್ ತಾಲೂಕಿನ ಮದ್ವಾರ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿ, ನಂತರ ಮಾರ್ಗ ಮಧ್ಯದಲ್ಲಿ ಗುರುಮಠಕಲ್ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ ಸಾರಿಗೆ ಸಚಿವ ಶ್ರೀ ರಾಮಲಿಂಗಾ ರೆಡ್ಡಿಯವರು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಿದರು.
ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭೆ ಸದಸ್ಯರಾದ ಶ್ರೀ ರಾಧಕೃಷ್ಣ ದೊಡಮನಿ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಸಿ ರೆಡ್ಡಿ ಅನಪೂರ್, KPCC ಪ್ರಧಾನ ಕಾರ್ಯದರ್ಶಿ ರಾಜ ಗೋಪಾಲ ರೆಡ್ಡಿ ಮುದಿರಾಜ, ಸಂಜೀವ ಕುಮಾರ್ ಚಂದಾಪುರ, ಸೈಯದ್ ಖಾಜಾ ಮೈನುದ್ದೀನ, ಗುರುಮಠಕಲ ಸಾರಿಗೆ ಇಲಾಖೆ ಸಂಚಾರಿ ನಿಯಂತ್ರಕರು ಶರಣಪ್ಪ ಹೂಗಾರ ಸೇರಿದಂತೆ ಅಪಾರ ಪ್ರಮಾಣದ ಕಾರ್ಯಕರ್ತರು ಹಾಜರಿದ್ದರು.
ವರದಿ ಜಗದೀಶ್ ಕುಮಾರ್
