
ಬೆಂಗಳೂರು : ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 21 ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ನಿನ್ನೆ ಸುದ್ದಿಗೋಷ್ಟಿ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಯುಸಿ ಫಲಿತಾಂಶ ಪ್ರಕಟಿಸಿದರು.

ಕಾಲೇಜುವಾರು ಫಲಿತಾಂಶ ಹೀಗಿದೆ
ಸರ್ಕಾರಿ ಕಾಲೇಜು: 57 ಪರ್ಸೆಂಟ್
ಅನುದಾನ ರಹಿತ: 82.66
ಅನುದಾನಿತ ಪದವಿ ಪೂರ್ವ ಕಾಲೇಜು: 62.6
ಬಿಬಿಎಂಪಿ ಲಿಮಿಟ್: 68.88 ಪರ್ಸೆಂಟ್
ವಸತಿ ಶಾಲಾ ಕಾಲೇಜು: 86.18
ವಿಭಜಿತ ಕಾಲೇಜು: 78.58 ಪರ್ಸೆಂಟ್ ಮಂದಿ ತೇರ್ಗಡೆ ಆಗಿದ್ದಾರೆ.
ಒಟ್ಟು ಫಲಿತಾಂಶ ಹೀಗಿದೆ
ಸೆಕೆಂಡ್ ಪಿಯುಸಿ ಒಟ್ಟು ಫಲಿತಾಂಶ ಹೀಗಿದೆ ಕಲಾ:- 53.29 ಪರ್ಸೆಂಟ್
ವಾಣಿಜ್ಯ :- 76.07 ಪರ್ಸೆಂಟ್
ವಿಜ್ಞಾನ :- 82.54 ಪರ್ಸೆಂಟ್
ವರ್ಷವೂ ಬಾಲಕಿಯರು ಮೇಲುಗೈ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಈ ವರ್ಷವೂ ಬಾಲಕಿಯರು ಮೇಲುಗೈ
68.20 ಬಾಲಕರು ಶೇಕಡಾವಾರು ಉತ್ತೀರ್ಣ
77.88 ಬಾಲಕಿಯರು ಶೇಕಡಾವಾರು ಉತ್ತೀರ್ಣ
ಮಂಗಳೂರಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ
ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
599 ಅಂಕಗಳನ್ನು ಅಮೂಲ್ಯ ಕಾಮತ್ ಗಳಿಸಿದ್ದಾರೆ.
ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ
ಕಲಾ ವಿಭಾಗದಲ್ಲಿ ಬಳ್ಳಾರಿ ಮೂಲದ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ 600 ಅಂಕಗಳಲ್ಲಿ 597 ಅಂಕ ಪಡೆದಿರುವ ಸಂಜನಾ ಬಾಯಿ ಬಳ್ಳಾರಿಯ ನಿರ್ಮಲಾಗೆ 596 ಅಂಕಗಳು.
ವರದಿ : ಜಿಲಾನ್ ಸಾಬ್ ಬಡಿಗೇರ.
