ಬಾಗಲಕೋಟೆ / ರಬಕವಿ – ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ 5 ಮತ್ತು 6 ನೇ ವಾರ್ಡಿನ ಮಲ್ಲಿಕಾರ್ಜುನ ಚಿತ್ರಮಂದಿರ ವನ್ನು ತೆರವುಗೊಳಿಸಿದ ನಂತರ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ರಬಕವಿ-ಬನಹಟ್ಟಿ ನಗರಸಭೆಯ ನಗರದ ವಾರ್ಡ್ ನಂ. 5 ಮತ್ತು 6 ರಲ್ಲಿ ಗಾಂಧಿಚೌಕ ಹತ್ತಿರ ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಈಗಾಗಲೇ 8 ಪೂಟ ಅಗಲದ 200 ಫೂಟ್ ಉದ್ದದ ರಸ್ತೆ ಇದ್ದು, ಇದು ಬಹಳ ಚಿಕ್ಕದಾಗಿದ್ದು, ಇದನ್ನು ಈಗ ಅಗಲೀಕರಣ ಮಾಡುವುದು ತುಂಬಾ ಅವಶ್ಯಕವಾಗಿದೆ ಏಕೆಂದರೆ ಇಲ್ಲಿ ಪ್ರತಿ ದಿನ ಕಾಯಿ ಪಲ್ಲೆ ವ್ಯಾಪಾರ ನಡೆಯುವುದರಿಂದ ಜನ ಸಂದಣಿ ಹೆಚ್ಚಾಗಿರುತ್ತದೆ. ಆದ್ದರಿಂದ ಇಲ್ಲಿ ಓಡಾಡಲು ವಯೋವೃದ್ಧರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಅಷ್ಟೆ ಅಲ್ಲದೆ ಈ ಸಮಯದಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಆಗುವುದಿಲ್ಲ. ಆದ್ದರಿಂದ ದಿನ ನಿತ್ಯ ಜಗಳ, ವಾಗ್ವಾದ ನಡೆಯುವುದು ಸಹಜವಾಗಿದೆ
ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಸದರಿ ರಸ್ತೆಯನ್ನು 20 ಫೂಟ್ ಅಗಲ ಮತ್ತು 200 ಪೂಟ ಉದ್ದದವರೆಗೆ ಅಗಲೀಕರಣ ಮಾಡಿ ಎಲ್ಲಾ ಸಾರ್ವಜನಿಕರು ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬನಹಟ್ಟಿ ಅಲ್ಪಸಂಖ್ಯಾತ ಕೋ-ಆಪರೇಟ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಇರ್ಷಾದ್ ಮೋಮಿನ್ , ಇಸೂಫ್ ಮುಧೋಳ್ , ಮಲ್ಲಿಕ ಸಾಬ್ ಮುಲ್ಲಾ, ಶಿರಾ ಸಾಬ್ ಮಳಲಿ , ಜಿನ್ನಾ ಮಳಲಿ , ಮೈನು ಮಳಲಿ ಬಂದೆ ನಮಾಜ್ ಡಾಂಗೆ , ಆಸಿಫ್ ಕಡ್ಲಿಮಟ್ಟಿ ಉಪಸ್ಥಿತರಿದ್ದರು.
- ಕರುನಾಡ ಕಂದ
