
ಬಳ್ಳಾರಿ / ಕಂಪ್ಲಿ : ಸಹಸ್ರಾರು ಭಕ್ತರ ಆರಾಧ್ಯ ದೈವ ವಾಗಿರುವ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಸಮಿತಿ ಅಧ್ಯಕ್ಷ ಮತ್ತು ಸದಸ್ಯರು ಮುಂದಾಗಬೇಕು ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು. ಕುರುಗೋಡು ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಇಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯಿಂದ ಮಂಗಳವಾರ ಆಯೋಜಿಸಿದ ಸಮಿತಿಯ ನೂತನ ಅಧ್ಯಕ್ಷ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ಅನೇಕ ವರ್ಷಗಳಿಂದ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯಾಗಿರಲಿಲ್ಲ ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿತ್ತು. ಆದ್ದರಿಂದ ಈಗ ಸಮಿತಿಗೆ ಕಾಲ ಕೂಡಿ ಬಂದಿದ್ದು ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಅಧಿಕಾರ ತೆಗೆದುಕೊಂಡು ಮೇಲೆ ಪ್ರಮಾಣಿಕವಾಗಿ ಮತ್ತು ಶಕ್ತಿಮೀರಿ ಕೆಲಸ ಮಾಡುವ ಆಶ್ವಾಸನೆ ಇದೆ ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಬೇಕು ದೇವಸ್ಥಾನದ ಆದಾಯ ದಿನದಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಆದಷ್ಟು ಬೇಗ ಸುಮಾರು 5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಮಾಡಲಾಗುವುದು ಕೆಲ ಸಮಸ್ಯೆಗಳು ಬಗೆಹರಿದರೆ ಕೇರಳ ಮಾದರಿಯಲ್ಲಿ ದೇವಸ್ಥಾನ ಅಭಿವೃದ್ಧಿ ಮಾಡಲಾಗುವುದು ದೇವರ ಆಶೀರ್ವಾದ ಇದ್ದರೆ ಒಂದೆರಡು ತಿಂಗಳಲ್ಲಿ ಮೊದಲು ಕುರುಗೋಡು ಉತ್ಸವವನ್ನು ಇತಿಹಾಸ ಸೃಷ್ಟಿಸುವಂತೆ ಮಾಡಲಾಗುವುದು ಎಂದರು. ನಂತರ ನೂತನ ಅಧ್ಯಕ್ಷ ಚಾನಳ ಆನಂದ ಮಾತನಾಡಿ ನಮ್ಮ ಮೇಲೆ ನಂಬಿಕೆ ಇಟ್ಟು ನೂತನ ಸಮಿತಿಗೆ ಆಯ್ಕೆ ಮಾಡಿದ್ದು ಈ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ದೇವಸ್ಥಾನದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರ. ನೂತನ ಪದಾಧಿಕಾರಿಗಳಾದ ಬಸವರಾಜ ಸಿ. ಪವನ್ ಕುಮಾರ, ಜಿ. ನಾಗರತ್ನ ಪಲ್ಲವಿ ಸಿ. ಮಲ್ಲಿಕಾರ್ಜುನ (ಅರ್ಚಕರು) ಮೂರ್ತಿ ಗಿರೀಶ, ಸಿದ್ದನಗೌಡ , ಇವರು ಪದಗ್ರಹಣ ಮಾಡಿದರು. ಇಂದು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಕ ಅಧಿಕಾರಿ ಹನುಮಂತಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಕುರುಗೋಡು ಸ್ವಾಮಿ ಮಠದ ನಿರಂಜನ ಪ್ರಭುಸ್ವಾಮಿ ಇವರು ದಿವ್ಯಸಾಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕುರುಗೋಡು ಪುರಸಭೆ ಅಧ್ಯಕ್ಷ ಶೇಕಣ್ಣ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಬಸಪ್ಪ, ಮುಖಂಡ ಗಾದಿಲಿಂಗಪ್ಪ ಸೇರಿದಂತೆ ಜನಪ್ರತಿನಿಧಿಗಳು ಮುಖಂಡರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
