ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನಲ್ಲಿ ನರೇಗಾ (NAREGA) ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಉಪಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ಬಳ್ಳಾರಿಯ ಗೀರಿಜಾ ಶಂಕರ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರು ದೇವಲಾಪುರ ಹಾಗೂ ಹಂಪಾದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ನೇರವಾಗಿ ಕೂಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಈ ಸಂವಾದದಲ್ಲಿ ಅವರು ಕೂಲಿಯ ಪ್ರಮಾಣ ಹಾಗೂ ಪಾವತಿ ಸಮಯದ ಬಗ್ಗೆ ಮಾಹಿತಿ ಪಡೆದರು.
NMMS ಹಾಜರಾತಿ ಪ್ರಕ್ರಿಯೆ ಕುರಿತು ಚರ್ಚೆಯನ್ನು ಮಾಡಿದರು.
ಕೆಲಸದ ಪ್ರಮಾಣಕ್ಕೆ ತಕ್ಕಂತೆ ಕೂಲಿ ನೀಡುವಿಕೆ ಕುರಿತು ಪರಿಶೀಲನೆ ಹಾಗು ಕೂಲಿ ಕಾರ್ಮಿಕರ ಮಕ್ಕಳು ಪಂಚಾಯತ ವ್ಯಾಪ್ತಿಯ ಕೂಸಿನ ಮನೆಯಲ್ಲಿ ಇರಿಸಲು ಸಲಹೆಯನ್ನು ನೀಡಿ, PMJJBY ಹಾಗೂ PMSBY ವಿಮಾ ಯೋಜನೆಗಳ ಮಹತ್ವವನ್ನು ವಿವರಿಸಿದರು. ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಲಭ್ಯತೆಯ ಅಗತ್ಯತೆ ಕುರಿತು ಸೂಚನೆ ನೀಡಿದರು. ತಮ್ಮ ಗಮನವನ್ನು ಪ್ರಮುಖ ಆರು ಅಂಶಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
