ಬಳ್ಳಾರಿ / ಎಮ್ಮಿಗನೂರು : ಗ್ರಾಮದ ಸರಕಾರಿ ಶತಮಾನ ಶಾಲೆಗೆ ಸ್ಥಳೀಯ ಕೆನರಾ ಬ್ಯಾಂಕಿನ 2024 25 ನೇ ಸಾಲಿನ ಸಿ ಎಸ್ ಆರ್ ಆಕ್ಟಿವಿಟೀಸ್ ಅನುದಾನದ ಅಡಿಯಲ್ಲಿ ಎರಡು ಬ್ಯೂರೋ ವಿತರಣೆ ಮಾಡಲಾಯಿತು.
ಈ ವೇಳೆ ಬ್ಯಾಂಕಿನ ಮ್ಯಾನೇಜರ್ ಸಂತೋಷ್ ಕುಮಾರ್ ಮಾತನಾಡಿ ಶಾಲೆಗಳಲ್ಲಿ ಶೈಕ್ಷಣಿಕ ದೃಷ್ಟಿಯಿಂದ ಅವಶ್ಯಕತೆ ಇರುವ ಪರಿಕರಗಳನ್ನು ಕೆನರಾ ಬ್ಯಾಂಕ್ ವತಿಯಿಂದ ನೀಡಲಾಗುತಿತ್ತು ಶಾಲೆಯ ಶಿಕ್ಷಕರು ಮತ್ತು ಪಾಲಕರು ಮಕ್ಕಳೊಂದಿಗೆ ಒಡನಾಟವನ್ನು ಹೊಂದಿ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಲು ಸಹಕವಾಗುತ್ತದೆ ಅಲ್ಲದೆ ಇದು ಒಂದು ಉತ್ತಮ ಕಾರ್ಯವಾಗಿದೆ ಎಂದರು.
ನಂತರ ಮುಖ್ಯ ಗುರು ಬಿ.ಎಸ್. ಸದುಜಾತಪ್ಪ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರವು ಕ್ಷೇತ್ರದೊಂದಿಗೆ ಸಂಬಂಧ ಬೆಳೆಸುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಪ್ರಶಂಸನೀಯವಾದದ್ದು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಬಸವರಾಜ್ ಶ್ರೀಶೈಲ ಶಿಕ್ಷಕರಾದ ವಾಣಿ ಶೃತಿ ಎಸ್ ರಾಮಪ್ಪ ಮಂಜುನಾಥ ಲೋಕೇಶ್ ಶೇಖಣ್ಣ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
