ಬಳ್ಳಾರಿ : ಕಂಪ್ಲಿ : ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಆದರ್ಶ, ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಇಲ್ಲಿಯ ಜೈನ ಸಮುದಾಯದ ಶಾಂತಿಲಾಲ್ ಬಾಲಾರ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಮಹಾವೀರ ಜಯಂತಿ ಅಂಗವಾಗಿ ಜೈನ ಸಮುದಾಯದವರು ಏರ್ಪಡಿಸಿದ್ದ ಮಹಾವೀರರ ಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೈನ ಧರ್ಮಿಯರು ತತ್ವಗಳಲ್ಲಿರುವ ಬಡವರಿಗಾಗಿ ದಯೆ, ಪ್ರೀತಿ, ಕರುಣೆಯ ಪ್ರತೀಕವಾಗಿ ನೀರಿನ ಅರವಟಿಗೆ, ಬಸ್ ತಂಗುದಾಣ ಆರೋಗ್ಯ ಶಿಬಿರಗಳನ್ನು ಸಮಾಜದ ವತಿಯಿಂದ ಆಯೋಜಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಯಂತಿ ಅಂಗವಾಗಿ ಮಹಾವೀರ ಮೂರ್ತಿಗೆ ಅಲಂಕರಿಸಿ, ಜೈನ ಮಂದಿರದಿಂದ ಮುಖ್ಯ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಮಹಾವೀರರ ಶಾಂತಿ ಸಂದೇಶಗಳುಳ್ಳ ಹಾಡುಗಳನ್ನು ಹಾಡುತ್ತಾ, ಸಾಗಿದರು.
ಸಮುದಾಯದ ಹಿರಿಯ ಮುಖಂಡರಾದ ಪಾರಸ್ ಮಲ್ ಹುಂಡಿಯ, ಜೋರಾಮಲ್ ಬಾಗ್ರೆಚ್, ಶಾಂತಿಲಾಲ್ ಸಿಂಘ್ವಿ , ಗೌತಮ್ ಬಾಗ್ರೇಜ್ , ಫತೇಕುಮಾರ ಭಾಪನಾ, ಸೇರಿದಂತೆ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
