
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಧ್ಯದಲ್ಲಿರುವ ಉದ್ಯಾನವನವು ಅನೈತಿಕ ಚಟುವಟಿಕೆಯ ತಾಣವಾಗಿದೆ.
ಈ ಉದ್ಯಾನವನಕ್ಕೆ ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ.
ಸಾರಾಯಿ ಬಾಟಲಿಗಳು ಬಿಡಿ ಸಿಗರೇಟ್ ಸೇದುವ ಜನರಿಗೆ ಈ ಉದ್ಯಾನವನವು ಅನುಕೂಲವಾಗಿದೆ,
ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇಲ್ಲಿರುವ ಗಿಡ ಮರಗಳು ಒಣಗಿ ಹೋಗಿವೆ.
ಹೋದ್ರೆ ಹೋಗಲಿ ಬಿಡಿ ಸ್ವಾಮಿ ನಮಗೆ ಟೈಮ್ ಗೆ ಸರಿಯಾಗಿ ಸಂಬಳ ಬಂದ್ರೆ ಸಾಕು ಅಂತ ಆರಾಮಾಗಿ ಎಸಿ ರೂಮಲಿ ಕುಳಿತಿರುವ ಅಧಿಕಾರಿಗಳು ಕೆಲಸಕ್ಕೆ ಕರೆಯಬೇಡಿ, ಸಂಬಳಕ್ಕೆ ಮಾತ್ರ ಮರೆಯಬೇಡಿ ಎಂಬಾತಾಗಿದೆ ಈ ಅಧಿಕಾರಿಗಳ ವ್ಯವಸ್ಥೆ ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ
