
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಬುಧವಾರ ದಿನಾಂಕ 9.4.2025 ರಿಂದ ಗುರುವಾರ 24. 4. 2025 ರವರೆಗೆ ರ ವರೆಗೆ ಜಾತ್ರೆ ಕಾರ್ಯಕ್ರಮ ನಡೆಯುತ್ತದೆ. ದಿ. 09.04.2025 ರಂದು ಶ್ರೀ ರಾಚೋಟೇಶ್ವರ ಹೊನ್ನಕಿರಣಗಿಯ ವೈದಿಕ ಬಳಗದಿಂದ ಗಂಗಾರತಿಯೊಂದಿಗೆ ಜಾತ್ರೆಯು ಕಾರ್ಯಕ್ರಮವು ಪ್ರಾರಂಭವಾಯಿತು. ಜಾತ್ರೆಯ ನಿಮಿತ್ಯವಾಗಿ ಶ್ರೀ ನೀಲಕಂಠ ಕಾಳೇಶ್ವರ ಮಹಾಪುರಾಣ ಗುರುವಾರ 10- 04- 2025 ರಿಂದ 20-04-2025 ಭಾನುವಾರ ವರೆಗೆ ನಡೆಯುವ ಪುರಾಣ ಕಾರ್ಯಕ್ರಮವು 7:00 ಗಂಟೆಗೆ ಪ್ರಾರಂಭವಾಗುತ್ತದೆ. ಸೋಮವಾರ 21.04.2025 ರಂದು ಸಂಜೆ 6:00 ಗಂಟೆಗೆ ಸಹಸ್ರ ದೀಪೋತ್ಸವ, ಮಂಗಳವಾರ 22.04.2025 ರಂದು ಬೆಳಿಗ್ಗೆ 6 ಗಂಟೆಗೆ ಅಗ್ನಿ ಪೂಜೆ, ಬುಧವಾರ 23.04.2025 ರಂದು ಬೆಳಿಗ್ಗೆ 6 ಗಂಟೆಗೆ ಅಗ್ನಿ ಪ್ರವೇಶ ಮತ್ತು ಸಂಜೆ 6 ಗಂಟೆಗೆ ವೈಭವದ ರಥೋತ್ಸವ, ಗುರುವಾರ 24 -04- 2025 ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಅದ್ದೂರಿ ಪಲ್ಲಕ್ಕಿ ಮೆರವಣಿಗೆ, ಸಂಜೆ 4:00ಗೆ ಕುಸ್ತಿಗಳು ಈ ರೀತಿಯಾಗಿ ದಿನಾಂಕ 23 24 ಮತ್ತು 25 ಏಪ್ರಿಲ್ 2025 ರಂದು ಪ್ರತಿ ನಿತ್ಯ ರಾತ್ರಿ 10.30 ಗಂಟೆಗೆ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ವಿರುತ್ತದೆ. ಈ ರೀತಿಯಾಗಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಜಗದೇವ ಟಿ. ಗುತ್ತೇದಾರ್ ವಿಧಾನಪರಿಷತ್ ಸದಸ್ಯರು ಹಾಗೂ ಗೌರವಾಧ್ಯಕ್ಷರು ಶ್ರೀ ನೀಲಕಂಠೇಕೇಶ್ವರ ದೇವಸ್ಥಾನ ಸಮಿತಿ ಮತ್ತು ಪುರಾಣ ಸಮಿತಿ ಹಾಗೂ ಸದ್ಭಕ್ತ ಮಂಡಳಿ ಕಾಳಗಿ ರವರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
ವರದಿ: ಚಂದ್ರಶೇಖರ್ ಆರ್ ಪಾಟೀಲ್
