ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಜಗಜ್ಯೋತಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ಸಾಮೂಹಿಕ ವಿವಾಹ ಪ್ರಯುಕ್ತ ನವ ವಧುವರರಿಗೆ ಉಡಿಯನ್ನು ತುಂಬಿ ಉಡುಗೊರೆಯಾಗಿ ಪ್ಯಾಂಟ್ ಶರ್ಟ್, ಸೀರೆ ನೀಡಿ ನವ ವಧುವರರಿಗೆ ಬುದ್ಧ ಬಸವ ಅಂಬೇಡ್ಕರ್ ರವರು ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಹಾರೈಸಲಾಯಿತು.
ಈ ಸಂದರ್ಭದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಮಾರುತಿ ಕೆಳಗೇರಿ, ಸಂಗೀತಾ ಚಾವರೆ, ಉಜ್ವಲಾ ಬೇವೂರ, ಸಂಗೀತಾ ಕಾಂಬಳೆ, ವಣ್ಣೂರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವರದಿ:ಭೀಮಸೇನ ಕಮ್ಮಾರ
