ಯಾದಗಿರಿ/ ಗುರುಮಠಕಲ್ : ಹಿಂದೂ ಯುವ ಘರ್ಜನೆ ಸಮಿತಿ ಗುರುಮಠಕಲ್ ವತಿಯಿಂದ ಹನುಮಾನ ಜಯಂತಿ ನಿಮಿತ್ತ ಬೃಹತ್ ಶೋಭೆಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವೆಂಕಟೇಶ್ ಮುದಿರಾಜ್ ತಿಳಿಸಿದರು.
ಶೋಭಾಯಾತ್ರೆಯು ಸಂಜೆ 4.30ಕ್ಕೆ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಿಂದ ಸಿಹಿ ನೀರು ಬಾವಿ ಶ್ರೀನಗರಶ್ವರ ದೇವಸ್ಥಾನ ಮುಖಾಂತರ ಸಾಗಿ ಅಂಚೆ ಕಚೇರಿ, ಮಲ್ಲಯ್ಯ ಕಟ್ಟ ಮೂಲಕ ಹನುಮಾನ್ ದೇವಸ್ಥಾನದ ತಲುಪುವದು.
ಗುರುಮಠಕಲ್ ಹಾಗೂ ಸುತ್ತಮುತ್ತಲಿನ ಹನುಮಾನ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವರು ಮನವಿ ಮಾಡಿದ್ದಾರೆ.
ವರದಿ: ಜಗದೀಶ್ ಕುಮಾರ್
