ಬೀದರ್: ನಗರದ ಶ್ರೀ ಸ್ವಾಮಿ ನರೇಂದ್ರ ಪ.ಪೂ ಕಾಲೇಜಿನ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರಿಕ್ಷೇಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ
ಐಶ್ವರ್ಯ ಶರಣಯ್ಯ- ಶೇ.93,
ಕಿರ್ತಿ ರವಿಕುಮಾರ- ಶೇ.91,
ಸುಕನ್ಯ ಚನ್ನಯ್ಯಾ- ಶೇ.89.66,
ಕೀರ್ತಿ ಅಮೃತ್ ರಾವ್- ಶೇ. 87.33
ರಷ್ಟು ಫಲಿತಾಂಶ ಪಡೆದ ಅವರು ಈ ವರ್ಷದ ವಾರ್ಷಿಕ ಪರಿಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಸಾಧಿಸಿ ತಮ್ಮ ಕಠಿಣ ಪರಿಶ್ರಮಕ್ಕೆ ಮತ್ತು ಶೈಕ್ಷಣಿಕ ಮಟ್ಟಕ್ಕೆ ತಕ್ಕ ಪ್ರತಿಫಲವನ್ನು ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಇವರು ಸಂಸ್ಥೆಯ ಮತ್ತು ಕುಟುಂಬದ ಗೌರವ ಹೆಚ್ಚಿಸಿದ್ದಾರೆ. ಕೀರ್ತಿ ರವಿಕುಮಾರ ಮಾತನಾಡಿ ತನ್ನ ಸಾಧನೆಗೆ ಪಾಲಕರು ಹಾಗೂ ಉಪನ್ಯಾಸಕರೇ ಕಾರಣರಾಗಿದ್ದು, ಅವರ ಉತ್ತಮ ಮಾರ್ಗದರ್ಶನವೇ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಸುಕನ್ಯಾ ಚನ್ನಯ್ಯಾ ಸ್ವಾಮಿ ಮಾತನಾಡಿ
“ನನಗೆ ಈ ಮಟ್ಟದ ಯಶಸ್ಸು ದೊರಕಲು ನನ್ನ ಪಾಲಕರು ಹಾಗೂ ಉಪನ್ಯಾಸಕರಿಂದ ಲಭಿಸಿದ ಪ್ರೋತ್ಸಾಹ…” ಹಾಗೂ ಮಾರ್ಗದರ್ಶನ ಅತ್ಯಂತ ಮಹತ್ವಪೂರ್ಣವಾಗಿದೆ. ಅವರ ಬೆಂಬಲವಿಲ್ಲದೆ ನಾನು ಈ ಸಾಧನೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಅವರು ಅಭಿಮಾನದಿಂದ ಹೇಳಿದರು. ಅವರು ಮುಂದಿನ ಶಿಕ್ಷಣವನ್ನು ಇನ್ನಷ್ಟು ಉತ್ತುಂಗಕ್ಕೆ ತರುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು. ಕೀರ್ತಿ ಅಮೃತ್ ರಾವ್ ಮಾತನಾಡಿ “ಈ ಸಾಧನೆಯ ಹಿಂದಿರುವ ಮೂಲಶಕ್ತಿಯಾಗಿ ತಾಯಿ, ತಂದೆ ಮತ್ತು ಉಪನ್ಯಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ‘ಅವರ ಸಮಯೋಚಿತ ಮಾರ್ಗದರ್ಶನ ಮತ್ತು ನಿರಂತರ ಉತ್ತೇಜನವೇ ನನಗೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಕಾರಿಯಾಗಿದೆ’ ಎಂದು ಅವರು ಸಂತೋಷ ಹಂಚಿಕೊಂಡರು.
ಇವರ ಸಾಧನೆಗೆ ಮನೆಗಳಲ್ಲಿ ಸಿಹಿ ಹಂಚಿ ಹಬ್ಬದಂತೆ ಸಂಭ್ರಮಿಸಿದರು, ಕೀರ್ತಿ ಆರ್. ಅವರ ಪಾಲಕರಾದ ಶ್ರೀ ರವಿಕುಮಾರ ತಾಯಿ ಶ್ರೀಮತಿ ಪುಷ್ಪ, ಸಹೊದರನಾದ ಕರಣ, ಹಾಗೂ ಸುಕನ್ಯಾ ಸಿ. ಅವರ ಪಾಲಕರಾದ ಶ್ರೀ ಚನ್ನಯ್ಯ ಸ್ವಾಮಿ, ತಾಯಿ ಶ್ರೀಮತಿ ಕವಿತಾ, ಸಹೊದರರಾದ ಆನಂದ ಸ್ವಾಮಿ, ಶಿವಾನಂದ ಸ್ವಾಮಿ, ಮತ್ತು ಕೀರ್ತಿ ಎ. ಅವರ ಪಾಲಕರಾದ ಶ್ರೀ ಅಮೃತರಾವ್ ತಾಯಿ ಶ್ರೀಮತಿ ಶಾರದಾ,
ಸಹೋದರಿಯರಾದ ಕು. ಅರ್ಚನಾ, ಕು. ಐಶ್ವರ್ಯ, ಕು. ಅಂಜಲಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇವರು ಮುಂದಿನ ಶಿಕ್ಷಣ ಹಾಗೂ ವೃತ್ತಿ ಜೀವನದಲ್ಲೂ ಇದೇ ರೀತಿ ಸಾಧನೆ ನಡೆಸಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಇವರನ್ನು ಪ್ರಶಂಸಿಸಿ, ಪ್ರೋತ್ಸಾಹ ವ್ಯಕ್ತಪಡಿಸಿದೆ. ಇವರ ಸಾಧನೆಯಿಂದ ಪ್ರೇರಿತಗೊಂಡು, ಇನ್ನೂ ಹಲವರು ತಮ್ಮ ಕನಸುಗಳತ್ತ ಧೈರ್ಯದಿಂದ ಮುನ್ನಡೆದಂತೆ ಆಗಲಿ ಎಂಬುದು ಎಲ್ಲರ ಆಶಯ.”
ವರದಿ: ಸಾಗರ್ ಪಡಸಲೆ
