
ಬಳ್ಳಾರಿ/ಕಂಪ್ಲಿ : ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆಯವರೆಗಿನ ರಸ್ತೆಯನ್ನು ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತವತಿಯಿಂದ ಮನೆ ಹಾಗೂ ಅಂಗಡಿ ಅಪಾಯಕಾರಿ, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಮೂರು ಜೆ.ಸಿ.ಬಿಯಿಂದ ತೆರವುಗೊಳಿಸಿದರು. ಮಸೀದಿಯಿಂದ ಜೋಗಿ ಕಾಲುವೆವರೆಗೂ ರಸ್ತೆ ಅತ್ಯಂತ ಕಿರಿದಾಗಿದ್ದು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯಾಗಿದ್ದರಿಂದ ಪುರಸಭೆ ಸಾಮಾನ್ಯ ಸಭೆಯಲ್ಲಿ ತಿರ್ಮಾನವಾಗಿತು, ಶಾಸಕ ಜೆ.ಎನ್. ಗಣೇಶ ರವರು ಸ್ಥಳೀಯ ಮುಖಂಡರ ಹಾಗೂ ಸಾರ್ವಜನಿಕರ ಸಭೆ ಮಾಡಿದ್ದರು. ನಿವಾಸಿಗಳು ಒಟ್ಟು 35 ಅಡಿಗೆ ಅಗಲೀಕರಣಕ್ಕೆ ಎಲ್ಲರ ಸಮಕ್ಷಮದಲ್ಲಿ ತೀರ್ಮಾನವಾಗಿತ್ತು. ನಿವಾಸಿಗಳು ಎಡಕ್ಕೆ 17.5 ಬಲಕ್ಕೆ 17.5 ಅಡಿಗಳಿಗೆ ತೆರವುಗೊಳಿಸಲಿಕ್ಕೆ ಸಾರ್ವಜನಿಕರು ಮತ್ತು ಮುಖಂಡರು ಒಪ್ಪಿದ್ದರು. ಆದರೆ ಇವತ್ತಿನವರೆಗೂ ನಿವಾಸಿಗಳು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿಲ್ಲ ಆದ್ದರಿಂದ ನಿವಾಸಿಗಳಿಗೆ ನೋಟಿಸ್ ನೀಡಿ ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತ 60 ಮನೆ ಮನೆಗಳು ಸೇರಿದಂತೆ ಅಂಗಡಿಗಳ ಕಟ್ಟಡ ತೆರವುಗೊಳಿಸಿತು. ಕೆಲವೊಂದು ಮನೆಯವರು ಅಡ್ಡಗಟ್ಟಿದರು. ಮನೆಯನ್ನು ಕಳೆದುಕೊಂಡು ಸ್ಥಳೀಯ ನಿವಾಸಿಗಳ ದುಃಖಿಸುವ ಸ್ಥಿತಿ ಎಲ್ಲರ ಮನ ಕರಗುವಂತೆ ಮಾಡಿತು. ಆದರೂ ಸಹ ಪುರಸಭೆ ಆಡಳಿತ ತೆರವುಗೊಳಿಸಿದರು. 27 ಮನೆಯ ನಿವಾಸಿಗಳು ಕೋರ್ಟಿಗೆ ಹೋಗಿದ್ದಾರೆ. ನಿವಾಸಿಗಳ ಪರ ವಕೀಲರಾದ ಕೊಪ್ಪಳದ ಮಂಜುನಾಥ ಮಸ್ಕಿ ಮಾತನಾಡಿ ಇನ್ನೂ ನಿವಾಸಿಗಳ ದಾವೆ ಕೋರ್ಟಿನಲ್ಲಿ ಇದ್ದು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಆದರೆ ಏಕಾಏಕಿ ಪುರಸಭೆಯವರು ತೆರವುಗೊಳಿಸುತ್ತಿರುವುದು ನಮ್ಮ ಕಕ್ಷೀದಾರಿಗೆ ಮಾಡಿದ ಅನ್ಯಾಯ ಎಂದು ತಿಳಿಸಿದರು. ನಡವಲ ಮಸೀದಿಯಿಂದ ಜೋಗಿ ಕಾಲುವೆಯವರೆಗೂ ತೆರವುಗೊಳಿಸಲಾಯಿತು. ನಿವಾಸಿಗಳಿಗೆ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ ಹೇಳಿದರು. ಪೋಲಿಸರ ಭಾರೀ ಬಿಗಿ ಭದ್ರತೆಯನ್ನು ಏರ್ಪಡಿಸಿದರು. ಕೆ ಇ.ಬಿ. ಹಾಗೂ ಪಿ.ಡಬ್ಲ್ಯೂ .ಡಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಸಹಕಾರದಿಂದ ತೆರವುಗೊಳಿಸಲಾಯಿತು. ಸಿ.ಪಿ.ಐ ಕೆ. ಬಿ. ವಾಸುಕುಮಾರ, ಪುರಸಭೆ ಜೆ ಇ.ಮೇಘನ ಮ್ಯಾನೇಜರ್ ಶರಣಪ್ಪ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್
