ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ
ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ (ರಿ.) ಆಲಮೇಲ ತಾಲೂಕು ಘಟಕದಿಂದ ದಿನಾಂಕ 11/ 4 /2025 ರಂದು ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ಕೃಷಿ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆದಾರರ ವಿವಿಧ ಕುಂದು ಕೊರತೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಭಗವಂತರಾಯ ಬಿರಾದಾರ್ ಹಾಗೂ ಗೌರವಾಧ್ಯಕ್ಷರಾದ ಕುಮಾರಸ್ವಾಮಿ ಮಠಪತಿ ಹಾಗೂ ಸಹ ಕಾರ್ಯದರ್ಶಿಯಾದ ರವಿ ಚೌಹಾಣ್ ಹಾಗೂ ಸಿಂದಗಿ ತಾಲೂಕು ಘಟಕದ ಅಧ್ಯಕ್ಷರಾದ ಕಿಸಾನ್ ನಾಯಕ್ ಮತ್ತು ಆಲಮೇಲ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆದಾರರು ಉಪಸ್ಥಿತರಿದ್ದರು. ಈ ಸಮಯದಲ್ಲಿ ರವಿ ಚೌಹಾಣ್ ಹಾಗೂ ಕಿಸಾನ್ ನಾಯಕ್ ಅವರು ಮಾತನಾಡಿದರು. ಕೂಡಲೇ ಬೆಳೆ ಸಮೀಕ್ಷೆದರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.
ವರದಿ : ಹಣಮಂತ ಚ. ಕಟಬರ್
