ಯಾದಗಿರಿ: ಅಫಜಲಪೂರ ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಭಾಗಮ್ಮ ದೇವಿಯ ಗುಡಿಯಲ್ಲಿ ಜವಳ ಕಾರ್ಯಕ್ರಮಕ್ಕೆ ಹೊರಟ ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ಗುರುವಾರ ರಾತ್ರಿ ಜರುಗಿದೆ. ಶಹಾಪುರ ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ದಿನಾಂಕ 10-04-25 ರಾತ್ರಿ 08:15 ಸುಮಾರಿಗೆ ತನ್ನ ಮುಂದೆ ಹೋಗುತ್ತಿದ್ದ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಎದರುಗಡೆ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿರುತ್ತದೆ, ಅಪಘಾತವಾದ ಪರಿಣಾಮ 4 ಜನ ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರ ವಿವರ :
1)ಶರಣಪ್ಪ ತಂದೆ ಹಣಮಯ್ಯ ವನಕುಣಿ ವ. 30ವರ್ಷ ಜಾ॥ ಬೇಡರ ಉ॥ ಚಾಲಕ ಸಾ|| ವರ್ಕನಳ್ಳಿ
2) ಸುನಿತಾ ತಂದೆ ಮಲ್ಲೇಶಪ್ಪ ಕವಲಿ ವ. 19ವರ್ಷ ಜಾ॥ ಬೇಡರ ಉ|| ಕೂಲಿ ಸಾ| ವರ್ಕನಳ್ಳಿ
3) ಸೋಮವ್ವ ಗಂಡ ಹಣಮಂತ ಬಳಿಚಕ್ರ ವ. 50 ವರ್ಷ ಜಾ॥ ಬೇಡರ ಉ। ಕೂಲಿ ಸಾ| ವರ್ಕನಳ್ಳಿ
4) ತಂಗಮ್ಮ ಗಂಡ ಹುಲೆಪ್ಪ ಕವಲಿ ವ. 55 ವರ್ಷ
ಜಾ। ಬೇಡರ ಉ॥ ಕೂಲಿ ಸಾ॥ ವರ್ಕನಳ್ಳಿ ತಾ ಜಿ ಯಾದಗಿರಿ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸುನೀತಾ ತಂದೆ ಮಲ್ಲೇಶಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರಿಗೆ ಗಾಯಾಳುಗಳಿರುತ್ತಾರೆ.
ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ, ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಎಸ್ ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಜಗದೀಶ್ ಕುಮಾರ್
