ಬಳ್ಳಾರಿ / ಕಂಪ್ಲಿ : ಶಿವಶರಣೆ, ವಚನಗಾರ್ತಿ ಅಕ್ಕಮಹಾದೇವಿ ಜಯಂತಿಯನ್ನು ಶನಿವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ತಹಶೀಲ್ದಾರರಾದ ಶಿವರಾಜ್ ಎಸ್ ಶಿವಪುರ ಅವರು ಭಾಗವಹಿಸಿ ಮಾತನಾಡಿ 12ನೇ ಶತಮಾನದ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದಾರೆ. ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಎಲ್ಲಾ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತು ಬದುಕಿನ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದರು. ಅಕ್ಕನ ವಚನಗಳ ಸಾರವನ್ನು ಇಂದಿನ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕಾರ್ಯವಾಗಬೇಕಿದೆ ಎಂದರು. ಅವರು ಅಕ್ಕಮಹಾದೇವಿ ರವರ ಧಾರ್ಮಿಕ ತತ್ತ್ವಗಳು, ಸಾಧನೆ ಹಾಗೂ ಮಹಿಳಾ ಸಬಲಿಕರಣಕ್ಕೆ ನೀಡಿದ ಅಜರಾಮರ ಎಂಬ ಭಾವನೆಯ ಕುರಿತು ವಿವರಿಸಿದರು.
ಅಕ್ಕಮಹಾದೇವಿ ಸಂಘದವರು ಹಾಗೂ ಮಹಿಳಾ ಮಂಡಳಿ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
