ಬಳ್ಳಾರಿ / ಕಂಪ್ಲಿ :ವಿದ್ಯಾರ್ಥಿನಿಯರು ಯೋಗ ಧ್ಯಾನ ಪ್ರಾಣಯಾಮ ಅಳವಡಿಸಿಕೊಂಡಾಗ ಮಾತ್ರ ಜ್ಞಾನ ವೃದ್ದಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿ ಸದಸ್ಯರಾದ ಕೆ.ನಾಗಪ್ಪ ಹೇಳಿದರು. ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೇ ದಿನ ಯೋಗ ಪ್ರಾಣಯಾಮ ಧ್ಯಾನ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒತ್ತಡ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಯೋಗ ಧ್ಯಾನ ಅವಶ್ಯಕವಾಗಿ ಬೇಕು ವಿದ್ಯಾರ್ಥಿನಿಯರು ಪ್ರತಿದಿನ ಯೋಗ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ಮತ್ತು ಉತ್ತಮ ಆಲೋಚನೆ ಧನಾತ್ಮಕ ಚಿಂತನೆಗೆ ನಿರ್ಮಲವಾದ ಮನಸು ಒದಗಿಸುತ್ತದೆ. ಯಾವುದೇ ಪರೀಕ್ಷೆಗಳಿಗೆ ಹೆದರಿಕೆಯಿಲ್ಲದೆ ಬರುವಂತಾಗಲು ಯೋಗ ಸಹಕಾರಿ ಆಗುತ್ತದೆ ಎಂದರು. ನಂತರ 371 ಜೆ ಮೀಸಲಾತಿ ಸದ್ಬಳಕೆ ಬಗ್ಗೆ ಹೊಸಬಂಡಿ ಹರ್ಲಾಪುರ ಕಾಲೇಜು ಉಪನ್ಯಾಸಕ ಮಾತನಾಡಿ 371 ಜೆ ಬಳಕೆಯಿಂದಾಗಿ ಉನ್ನತ ವಿದ್ಯಾಭ್ಯಾಸ ಜೋತೆಗೆ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಪಡೆಯಬಹದು. ಉದೋಗ್ಯದಲ್ಲಿ ಶೇ 100 ರಲ್ಲಿ ಪ್ರತಿಶತ 7೦ ರಷ್ಟು ಮೀಸಲಾತಿಯನ್ನು ಸದುಪಯೋಗ ಪಡೆಯಿರಿ ಎಂದರು ಗಂಗಾವತಿ ಆಂಗ್ಲ ಉಪನ್ಯಾಸಕ ಎ.ಕೆ. ಮಹೇಶ ಮಾತನಾಡಿ 371 ಜೆ ಯಿಂದಾಗಿ ವಿದ್ಯಾರ್ಥಿಗಳು ಅಭಿವೃದ್ದಿ ವಿಚಾರದಲ್ಲಿ ನಮ್ಮ ಹಕ್ಕು ಕರ್ತವ್ಯಗಳ ಕೇಳುವ ಮುಖಾಂತರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರಾಮಸಾಗರ ಸರ್ಕಾರಿ ಪೌಢ್ರಶಾಲೆ ಸ.ಶಿ ರಮೇಶ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ, ಸೇವಾ ಮನೋಭಾವ ಅನುಭವಗಳನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುರಿ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ವಿವಿಎಸ್ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ಜಿ.ನಾಯಕ.ವಿ.ಮ.ಪ.ಮ ಪ್ರಾಂಶುಪಾಲ ಮದ್ದಾನಪ್ಪ ಬಿಡನಾಳ ಉಪನ್ಯಾಸಕಿ ಸುನೀತಾ ಡಾ.ವಿಜಯಶಂಕರ, ಲಕ್ಷಣನಾಯಕ ಪಿಯು ಕಾಲೇಜು ಪ್ರಾಚಾರ್ಯ ಮಹಾಭಲೇಶ್ವರ, ಕಲ್ಮಠ ಪ್ರೌಢಶಾಲೆಯ ಸಹ ಶಿಕ್ಷಕ ಲೋಕೇಶ, ಉಪನ್ಯಾಸಕರಾದ ಉಮಾ ಮಹೇಶ್ವರಿ, ಮಲ್ಲಿಕಾರ್ಜುನ, ಮೇಘರಾಜ, ತಿರುಪತಿ, ಗೋಪಾಲ, ರಾಮಪ್ಪ, ಜಡೆಪ್ಪ, ಶಿಲ್ಪಾ, ಸುಕನ್ಯ, ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ
