ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಯಲಾಟ ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿದೆ : ಕೆ. ಆರ್. ದುರ್ಗಾದಾಸ್.

ಬಳ್ಳಾರಿ/ ಕಂಪ್ಲಿ : ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವ ಮೂಲಕ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್.ದುರ್ಗಾದಾಸ್ ವಿಷಾದ ವ್ಯಕ್ತಪಡಿಸಿದರು. ಕಂಪ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇಂದು ಎಲೆಕ್ಟ್ರಾನಿಕ್ಸ್ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿವೆ ಎಂದು ವಿಷಾದಿಸಿದ ಅವರು ಬಯಲಾಟ ಪ್ರದರ್ಶನಗಳು ಪಾರಂಪರಿಕ ಪದ್ದತಿಗಳನ್ನು ಬಿಟ್ಟು ಲಘು ಮನೋರಂಜೆಯ ಹಾದಿ ಹಿಡಿದಿವೆ. ಗ್ರಾಮೀಣ ಪ್ರದೇಶದ ಜನರಿಗೆ ಪುರಾಣ, ಸಂಗೀತ, ಕುಣಿತ, ಅಭಿನಯಾದಿಗಳನ್ನು ಪರಿಯಿಸುತ್ತಿದ್ದ ಬಯಲಾಟಗಳನ್ನು ಇಂದು ಸಂರಕ್ಷಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ಹಲವಾರು ಕ್ರಿಯಾಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬಯಲಾಟ ಕಲಾವಿದರ ಮಾಹಿತಿ ಕೋಶವನ್ನು ಸಿದ್ಧಪಡಿಸುವುದು,ಬಯಲಾಟ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಪ್ರಕಟಿಸುವುದು, ಬಯಲಾಟ ಪ್ರದರ್ಶನಗಳಿಗೆ ಸಹಾಯಧನ ನೀಡುವುದು, ಹೊಸ ತಲೆಮಾರಿನ ಯುವಕರಿಗೆ ಬಯಲಾಟ ತರಬೇತಿ ನೀಡುವುದು, ಹೆಸರಾಂತ ಬಯಲಾಟ ಕಲಾವಿದರಿಗೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿಗಳನ್ನು, ಕಲಾವಿದರಿಗೆ ಮಾಶಾಸನ ಕೊಡುವುದರ ಮೂಲಕ ಬಯಲಾಟ ಕಲೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಮಲ್ಲೇಶಪ್ಪ, ಕನ್ನಡ ಉಪನ್ಯಾಸಕರಾದ ನಂ.10 ಮುದ್ದಾಪುರದ ಜೀರ್ ಮಲ್ಲಿಕಾರ್ಜುನ, ಉಪನ್ಯಾಸಕ ಡಾ.ಕೆ.ಶಿವಪ್ಪ, ಕಲಾವಿದರಾದ ಉಪ್ಪಾರ ದೊಡ್ಡಬಸಪ್ಪ ಹಾಗೂ ಬಸವರಾಜ, ಯಲ್ಲಪ್ಪ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ