ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಬಸವಣ್ಣನವರ ವಚನಗಳು ಎಂದಿಗೂ ಪ್ರಸ್ತುತ’ : ಎಚ್. ಪಂಪಾಪತಿ.

ಬಳ್ಳಾರಿ / ಕಂಪ್ಲಿ : ಪಟ್ಟಣದ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ 177ನೇ ಮಹಾಮನೆ ಕಾರ್ಯಕ್ರಮ ನಡೆಯಿತು.

ಎಮ್ಮಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಹಾಗೂ ಅಂಬೇಡ್ಕರ್ ವಿಚಾರವಾದಿ ಎಚ್. ಪಂಪಾಪತಿ ವಚನಕಾರರನ್ನು ಒಗ್ಗೂಡಿಸಿದ ‘ಬಸವಣ್ಣನವರ ಚಿಂತನೆ’ ಕುರಿತು ಉಪನ್ಯಾಸ ನೀಡಿ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿದ ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಮಾನವೀಯ ಮೌಲ್ಯ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವ ತತ್ವದ ಸಿದ್ಧಾಂತವೇ ಮನುಷ್ಯ ಪ್ರೀತಿಯಾಗಿದ್ದು, ಶಾಂತಿ, ನೆಮ್ಮದಿಯ ಪರಿಹಾರಕ್ಕೆ ಬಸವಣ್ಣವರ ವಚನಗಳೇ ಬಹು ದೊಡ್ಡ ಪರಿಹಾರವಾಗಿವೆ’ ಹಾಗೂ ಭವಿಷ್ಯದ ಬಗ್ಗೆ ವಚನಗಳ ಮೂಲಕ ಜೀವನ ಸಾಗಿಸಬಹುದು, ಜಾತಿಯ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ಹಾಗೂ ಮೂರ್ತಿ ಪೂಜೆಯನ್ನು ಖಂಡಿಸಿದವರು, ಸೂರ್ಯ ಚಂದ್ರ ಇರುವವರೆಗೆ ಬಸವಣ್ಣರ ವಚನಗಳು ಪ್ರಸ್ತುತವಾಗಿರುತ್ತದೆ. ದೇಹ, ಜಾತಿ, ರೂಪಾ ಇಲ್ಲದವರು ನಿಜವಾದ ದೇವರು, ಬಸವಣ್ಣನವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೃಢ ವಿಲ್ಲದ ಭಕ್ತಿ , ಮೂಡ ನಂಬಿಕೆಗಳ ವಿರುದ್ಧ ಹೋರಾಟವನ್ನು ಮಾಡಿ ಮುಕ್ತಿಗೆ ಭಕ್ತಿ ಮುಖ್ಯ ಎಂದು ತೋರಿಸಿದವರು, ತೋರ್ಪಡಿಕೆಯ ಭಕ್ತಿ, ಡಾಂಬಿಕತೆಯ ಭಕ್ತಿ ಬೇಡ, ಪ್ರತಿಯೊಬ್ಬ ವ್ಯಕ್ತಿಯು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯನ್ನು ಹೊಂದಬೇಕು. ಅಸಮಾನತೆ ತೊಲಗಿದ್ದು, ಎಲ್ಲೆಡೆ ಸಮಾನತೆ ಬೆಳೆಸಬೇಕಿದೆ. ಬಸವಣ್ಣನವರ ಮೂಲ ಉದ್ಧೇಶ ಅರಿತುಕೊಂಡು ಜೀವನ ಸಾಗಿಸಬೇಕಿದೆ’

ಶರಣರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರಸ್ತುತ ದಿನಮಾನಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ. ಶಿಕ್ಷಣವಂತರಿಂದಲೆ ಮೌಲ್ಯಗಳು ನಾಶವಾಗುತ್ತಿವೆ. ಶರಣರ ವಿಚಾರಗಳು ಕೇಳಲು ಸರಳವೆನಿಸಿದರೂ ಪಾಲನೆಗೆ ಕಡುಕಷ್ಟವಾಗಿವೆ. ಯುವಜನತೆಯ ಮನಸ್ಸನ್ನು ಮಾಗಿಸಿ ಸರಿದಾರಿಗೆ ತರುವಲ್ಲಿ ಶರಣ ಸಾಹಿತ್ಯ ವರದಾನವಾಗಿದೆ ಎಂದರು.

ದೇವರ ದಾಸಿಮಯ್ಯ, ಅಕ್ಕಮಹಾದೇವಿ , ಮಾದರ ಚೆನ್ನಯ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಅಂಬಿಗರ ಚೌಡಯ್ಯನವರ ವಚನಗಳು ಹಾಗೂ ಅದರ ಸಾರಾಂಶವನ್ನು ತಿಳಿಸಿದರು.

ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ 91% ರಷ್ಟು ಅಂಕಗಳಿಸಿದ ಕುಮಾರಿ ತೇಜಸ್ವಿನಿ ಕುಕನೂರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ನಿವೃತ್ತ ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್, ಡಾ.ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ ನ ಸಂಚಾಲಕ ಬಡಿಗೇರ್ ಜಿಲಾನಸಾಬ್, ಪ್ರಮುಖರಾದ ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಅಂಬಿಗರ ಮಂಜುನಾಥ, ಬಿ.ಎಂ.ರುದ್ರಯ್ಯ, ಬಿ.ಎಂ. ಪುಷ್ಪ, ಎಸ್.ರಾಮಪ್ಪ, ಪೀರಾಸಾಬ್, ಅಶೋಕ ಕುಕನೂರು, ಲೀಲಾವತಿ ಕುಕನೂರು, ಲೋಕೇಶ ಸೇರಿ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ