ವಿದ್ಯೆ ಎಂಬುದು ಜ್ಞಾನದ ರತ್ನ ಇದ್ದಂತೆ. ಯಾರೂ ಕೂಡ ಅದನ್ನು ಕದಿಯಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ಕೊಡುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯವಾಗಿದೆ. ಪೋಷಕರು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಪ ಸಮಯವನ್ನು ಮೀಸಲಿಡಬೇಕು. ಸಮಾಜದಲ್ಲಿ ಇವತ್ತು ಹಣ, ಅಧಿಕಾರಕ್ಕೆ ಬೆಲೆ ಇಲ್ಲ. ನಿಸ್ವಾರ್ಥವಾಗಿ ಯಾರೂ ಸೇವೆ ಸಲ್ಲಿಸುತ್ತಾರೆ ಅಂತಹವರನ್ನು ಸಮಾಜ ಗುರುತಿಸುತ್ತದೆ’
“ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರವಿಲ್ಲದ ಬದುಕು ಉಪ್ಪು ಖಾರವಿಲ್ಲದಾ ಖಾದ್ಯಗಳಿದ್ದಂತೆ.”
ಜೀವನ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ನಾವು ಸಂಸ್ಕಾರದಿಂದ ಬದುಕುತ್ತಿದ್ದೇವೆ ಎಂದರೆ ನಮ್ಮ
ಹುಟ್ಟಿಗೆ ಕಾರಣರಾದ ತಂದೆ ತಾಯಿಯರ ಕೊಡುಗೆ ಅಪಾರ ಗಂಡು ಹೆಣ್ಣಿನ ಸಮ್ಮಿಲನದಿಂದ ದೇಹ ಸೃಷ್ಟಿಗೆ ಕಾರಣವಾಗಬಹುದೇ ವಿನಹ ಆತ್ಮ ಮನಸ್ಸುಗಳಿಗಲ್ಲ. ಉತ್ತಮ ಶರೀರದ ಸೃಷ್ಟಿ ಒಳಗೆ ಉತ್ತಮ ಆತ್ಮ ಮನಸ್ಸು ಸೇರಿಕೊಳ್ಳುತ್ತದೆ ಅಷ್ಟೇ. ಆದ್ದರಿಂದ ಮಗು ಜನಿಸುವುದೇಕ್ಕಿಂತ ಮೊದಲು ಅಪ್ಪ ಅಮ್ಮನ ಸಂಸ್ಕಾರ ಪಡಿಯಚ್ಚು ಗರ್ಭದಲ್ಲಿಯೇ ಮೂಡಿರುತ್ತದೆ. ( ಸುಭದ್ರೆಯ ಗರ್ಭದಲ್ಲಿ ಅಭಿಮನ್ಯು ಇದ್ದಾಗ ಕೃಷ್ಣನ ಕಥೆ ಕೇಳಿದಂತೆ ). ಉತ್ತಮ ಸಂಸ್ಕಾರದೊಂದಿಗೆ ನಮ್ಮನ್ನು ನಾವು ಮತ್ತು ವ್ಯಕ್ತಿತ್ವವನ್ನು ಹೊರಹಾಕುವುದಕ್ಕೆ ಶಿಕ್ಷಣ ಒಂದು ಜೀವನದ ಅವಿಭಾಜ್ಯ ಅಂಗ. ನಮ್ಮ ಸಾಮರ್ಥ್ಯ, ಬುದ್ಧಿಶಕ್ತಿ, ಜ್ಞಾನ, ಕೌಶಲ್ಯ ಮೌಲ್ಯಗಳು, ನಡೆ-ನುಡಿ, ಆಚಾರ, ವಿಚಾರ, ಹಲವಾರು ಸದ್ಗುಣಗಳನ್ನ ಹೊರ ಹಾಕುವುದಕ್ಕೆ ಒಂದು ಉತ್ತಮ ವೇದಿಕೆ ಎಂದು ಹೇಳಬಹುದು.
ಶಿಕ್ಷಣ ಎಡುವುದಕ್ಕೆ ಬಿಡುವುದಿಲ್ಲ, ಸಂಸ್ಕಾರ ಕೆಡೋದಕ್ಕೆ ಬಿಡುವುದಿಲ್ಲ. ಎನ್ನುವಂತೆ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೆಂಬುವುದು ನಮ್ಮ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಅನುವು ಮಾಡಿಕೊಡುವ ಒಂದು ಸಾಧನ. ಶಿಕ್ಷಣವು ಕಲಿಕೆ, ಜ್ಞಾನ, ಮೌಲ್ಯಗಳು ಮತ್ತು ಸದ್ಗುಣಗಳನ್ನ ಬೆಳೆಸಿದರೆ ಸಂಸ್ಕಾರ,ಆಚಾರ -ವಿಚಾರ ನಡೆ – ನುಡಿ, ನೈತಿಕತೆಯ ಮೂಲಕ ನಮ್ಮ ಅಂತರವಲೋಕನದ ಮೂಲಕ ಹೊರಹಾಕಿ ವ್ಯಕ್ತಿತ್ವವನ್ನ ರೂಪಿಸಲು ಸಹಾಯ ಮಾಡುತ್ತದೆ. ಒಂದು ಮಗುವಿನಲ್ಲಿ ಸಂಸ್ಕಾರ ಬರಬೇಕೆಂದರೆ ಉತ್ತಮವಾದಂತಹ ಕುಟುಂಬ, ವಾತಾವರಣ, ಸಮಾಜ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಸಮಾಜದಲ್ಲಿ ಉತ್ತಮವಾದ ನಡವಳಿಕೆ ಶಿಕ್ಷಣ ಮತ್ತು ಸಂಸ್ಕಾರ ಕಲಿಕೆಯಾಗಿ ಮಾರ್ಪಾಡಾಗುತ್ತದೆ. ಸರಿಯಾದ ಶಿಕ್ಷಣದ ಪರಿಣಾಮವಾಗಿ ಉತ್ತಮ ಸಮಾಜವನ್ನು ಕಟ್ಟಲು ಯಶಸ್ವಿಯಾಗುತ್ತದೆ. ಇದು ಒಬ್ಬ ವ್ಯಕ್ತಿಯ ಜಗತ್ತನ್ನ ನೋಡುವ ಅನ್ಯಾಯ ಭ್ರಷ್ಟಾಚಾರ ಮತ್ತು ಹಿಂಸೆಗಳಂತಹ ಕೃತ್ಯಗಳ ವಿರುದ್ಧ ಹೋರಾಟ ಮಾಡುವ ಉತ್ತಮ ಸಮಾಜದ ನಾಯಕನನ್ನು ಹುಟ್ಟು ಹಾಕುತ್ತದೆ.
ಸಮಾಜದಲ್ಲಿ ನಾಯಕನಾಗಿ ಮಿಂಚಬೇಕೆಂದರೆ ತಂದೆ ತಾಯಿ ಕುಟುಂಬ ಸಮಾಜ ಮತ್ತು ಶಿಕ್ಷಣದ ಮೂಲಕ ಶಾಲೆ ಗುರುಗಳು ಮತ್ತು ಸ್ನೇಹಿತರಿಂದ ಕಲಿತ ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ಸಾಧ್ಯ.
ಲೇಖಕಿ : ಇಂತಿ ಕನ್ನಡತಿ,
ಶ್ವೇತಾ. ಕೆ, ಕಂಪ್ಲಿ.
