ಬಳ್ಳಾರಿ / ಕಂಪ್ಲಿ : ಮಹಾನೀಯರ,ಜಯಂತಿಗಳನ್ನು ಜಾತಿ, ಮತ, ಪಂಥ, ಧರ್ಮಗಳಿಗೆ ಸೀಮಿತಗೊಳಿಸದೇ ಪ್ರತಿಯೊಬ್ಬರೂ ಸಂಭ್ರಮದಿಂದ ಆಚರಿಸೋಣವೆಂದು ತಹಸಿಲ್ದಾರರಾದ ಶಿವರಾಜ ತಿಳಿಸಿದರು. ಇಲ್ಲಿನ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏ. 30ರಂದು ಆಚರಣೆ ಮಾಡಲಿರುವ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೈನಂದಿನ ಜೀವನದ ಮಾರ್ಗವನ್ನು ತೋರಿಸಿದಂತಹ ಮಹನೀಯರು, ಸಾಧು ಸಂತರು, ಸತ್ಪುರುಷರು,ರಾಷ್ಟ್ರ ನಾಯಕರ ಜಯಂತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸೋಣ, ಜಯಂತಿಗಳನ್ನು ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಅವರ ಜೀವನ ಚರಿತ್ರೆಗಳನ್ನು ಅರಿತೊಕೊಳ್ಳೋಣವೆಂದ ಅವರು ಏ. 30ರಂದು ತಾಲ್ಲೂಕು ಆಡಳಿತದಿಂದ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ವೀರಶೈವ ಲಿಂಗಾಯತ ಸಮುದಾಯದವರು ಸೇರಿದಂತೆ ಎಲ್ಲಾ ಸಮುದಾಯದವರು ಹಾಗೂ ಸರ್ಕಾರಿ ಕಚೇರಿಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಜಯಂತಿಯನ್ನು ಆಚರಣೆ ಮಾಡಿ ಆಗಮಿಸಬೇಕೆಂದರು. ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮಾತನಾಡಿ ಏ.30ರಂದು ಕಾಯಕ ಯೋಗಿ ಬಸವಣ್ಣನವರ ಜಯಂತಿಯನ್ನು ಸಮುದಾಯದಿಂದ ಸಂಜೆ ಏರ್ಪಡಿಸಿದ್ದು, ಸಂಜೆ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಿಂದ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ದೂರಿಯಿಂದ ನಡೆಸಲಿದ್ದು, ನಂತರ ಸಣಾಪುರ ರಸ್ತೆಯಲ್ಲಿರುವ ಸಂಘದ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ತಾಲ್ಲೂಕು ಆಡಳಿತದ ಅಧಿಕಾರಿಗಳು, ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಮುದಾಯದವರು, ವಿವಿಧ ಸಮುದಾಯಗಳ ಸಭೆಯಲ್ಲಿ ಭಾಗವಹಿಸಿ ಎಂದರು ಶಿರಸ್ತೆದಾರ ಎಸ್. ಕೆ. ರಮೇಶ್, ವೀರಶೈವ ಸಮಾಜದ ಮುಖಂಡರಾದ ಕೆ. ಎಂ. ಹೇಮಯ್ಯಸ್ವಾಮಿ, ಹೊನ್ನಳ್ಳಿ ಗಂಗಾಧರ್, ಎಸ್.ಡಿ.ಬಸವರಾಜ, ಬಿ.ವಿ.ಗೌಡ, ಜಿ.ಚಂದ್ರಶೇಖರಗೌಡ, ಎಚ್.ನಾಗರಾಜ, ಕೆ.ವಿರೂಪಾಕ್ಷಪ್ಪ, ಬಿ.ನಾರಾಯಣಪ್ಪ, ತಾಲ್ಲೂಕು ಪಂಚಾಯತಿಯ ಅಪರಂಜಿ, ಆರೋಗ್ಯ ಇಲಾಖೆಯ ಪಿ.ಬಸವರಾಜ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
