ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಭಾರೀ ಗಾಳಿ ಸಹಿತ ಲಘವಾಗಿ ಮಳೆ ಸುರಿದಿದ್ದು ತಾಲೂಕಿನ ಹ್ಯಾಳ್ಯ ಗ್ರಾಮದ ಶಾರದಮ್ಮ ಗಂಡ ತೋಟದ ಮನೆ ಶಿವಪ್ಪ ರವರ 159 ಸರ್ವೆ ನಂಬರ್ ನ 4 ಎಕರೆ 9 ಸೆಂಟ್ಸ್ ಜಮೀನಿನ ಬಾಳೆ ತೋಟ ಮತ್ತು ತೋಟದ ಮನೆ ಶಿವಪ್ಪ ತಾಯಿ ಹುಲಿಗೆಮ್ಮರವರು 160 ಸರ್ವೆ ನಂಬರ್ 4 ಎಕೆರೆ 50 ಸೆಂಟ್ಸ್ ನಮ್ಮ ಜಮೀನಿನ ಪಪ್ಪಾಯಿ ಮತ್ತು ಬಾಳೆ ಎರಡು ತೋಟಗಳ ಬೆಳೆಗಳು ಹಲವಡೆ ಅಂದಾಜು 15 – 20 ಲಕ್ಷ ರೂಪಾಯಿಗಳ ಮೊತ್ತದ ಬೆಳೆ ಹಾನಿ ಉಂಟಾಗಿದೆ,
ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಸುರಿಯಿತು, ಗಾಳಿಯ ವೇಗ ಜಾಸ್ತಿಯಾಗಿತ್ತು
ಹೀಗಾಗಿ ಬಾಳೆ ಗಿಡಗಳು ಪಪ್ಪಾಯಿ ಗಿಡಗಳು ಕಾಯಿ ಹಣ್ಣಗಳು ಮುಖಾಂತರ ನಮ್ಮ ಎರಡು ತೋಟಗಳಲ್ಲಿ ಬೆಳೆಗಳು ನೆಲಸಮವಾಗಿ ನಾಶವಾಗಿ ಹೋಗಿವೆ ಎಂದು ತೋಟದ ಮನೆ ಶಿವಪ್ಪ ರವರು ಮಾತನಾಡಿ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್. ಭರ್ಮಣ್ಣ ರವರು ಹಾಗೂ ರೈತ ಸಂಘಟನೆಯ ಮುಖಂಡರಾದ ಕೊಟ್ರೇಶಪ್ಪ ರವರು ಮಾತನಾಡಿ ಈ ತೋಟಗಳ ಬೆಳೆಗಳು ನಾಶವಾಗಿದ್ದರೂ ಈ ರೈತರ ಜಮೀನಿಗೆ ವಿಲೇಜ್ ಅಕೌಂಟೆಂಟ್ ಮಾತ್ರ ಆಗಮಿಸಿ ನಾಶವಾದ ಬೆಳೆ ಪರಿಶೀಲನೆ ಮಾಡಿದ್ದಾರೆ ಆದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಾಗಲೀ ಅಥವಾ ಸಿಬ್ಬಂದಿಗಳಾಗಲೀ ಮಾತ್ರ ಇತ್ತ ಕಡೆ ಇಲ್ಲಿಯವರಿಗೆ ತಿರುಗಿ ನೋಡಿಲ್ಲಾ ಕೂಡಲೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ರೈತರ ಜಮೀನಿಗೆ ಅಗಮಿಸಿ ಬೆಳೆ ಪರಿಶೀಲನೆ ಮಾಡಿ ಸರ್ಕಾರಕ್ಕೆ ಬೆಳೆ ನಾಶವಾದ ಬೆಳೆ ಪರಿಹಾರಕ್ಕೆ ವರದಿ ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರೈತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸದಲ್ಲಿ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿ ಮುಂಭಾಗದಲ್ಲಿ ಧರಣಿ ಮಾಡಬೇಕಾಗುತ್ತದೆ ಎಂದು ಪತ್ರಿಕೆಯ ಜೊತೆಗೆ ಮಾತನಾಡಿ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ರೈತ ಸಂಘಟನೆಯ ನಾಗರಾಜ, ರೈತರಾದ ವೆಂಕಟೇಶ್ ನಾಯ್ಕ್ , ಮಠದ ಕೊಟ್ರೇಶಪ್ಪ ,ರೈತ ಕುಟುಂಬಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ
