ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಹಾಗೂ ಜೀವವಿಮೆ ಮತ್ತು ಖಾಯಂಗೊಳಿಸುವ ಕುರಿತು ಮನವಿ ಪತ್ರ ಸಲ್ಲಿಕೆ

ಕಲಬುರಗಿ: ಶ್ರೀ ಡಾ: ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಹಾಗೂ ಉದ್ಯಮಶೀಲತೆ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ಇವರಿಗೆ ಕರ್ನಾಟಕ ರಾಜ್ಯದ ಪಿ ಆರ್( ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಹಾಗೂ ಜೀವವಿಮೆ ಮತ್ತು ಖಾಯಂಗೊಳಿಸುವ ಕುರಿತು ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯದಲ್ಲಿ ನಾವುಗಳು ಸುಮಾರು 9 ರಿಂದ 10 ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ ನಾವುಗಳು ಸೇವೆ ಸಲ್ಲಿಸುತ್ತಿರುವಾಗ ಹೊಲದಲ್ಲಿ ಹಾವು ಚೇಳು ಕಚ್ಚಿರುತ್ತವೆ ಹಾಗೂ ಕಾಡು ಹಂದಿಗಳು ತೋಳಗಳ ದಾಳಿಯಿಂದ ಗಾಯಗೊಂಡಿರುತ್ತೇವೆ ಮತ್ತೆ ಹೆಜ್ಜೇನುಗಳು ದಾಳಿ ಮಾಡಿರುತ್ತವೆ ಹಿಂದೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್ ಹಾಗೂ ಕೊಡ್ಲಾ ಎಂಬ ಗ್ರಾಮದಲ್ಲಿ ನಮ್ಮ ಇಬ್ಬರು (ಪಿ ಆರ್) ಬೆಳೆ ಸಮೀಕ್ಷೆದಾರರಿಗೆ ಹಾವು ಕಚ್ಚಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದರೂ ಸಹ ಪರಿಹಾರ ನೀಡಿರುವುದಿಲ್ಲ ನಾವುಗಳು ಜೀವದ ಆಸೆ ಬಿಟ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದೇವೆ ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ ಕೆಲವೊಮ್ಮೆ ಆವಚ ಶಬ್ದಗಳಿಂದ ಬೈಯುತ್ತಾರೆ, ನಾವುಗಳು ಈಗಾಗಲೇ ರಾಜ್ಯದಲ್ಲಿ ಸರಿ ಸುಮಾರು 25. ರಿಂದ 30. ಪಿ ಆರ್( ಖಾಸಗಿ ನಿವಾಸಿಗಳಿದ್ದು) ಈಗಾಗಲೇ ಹೈಕೋರ್ಟ್ ಆದೇಶದಂತೆ 10 ವರ್ಷ ದಿನಗೂಲಿ ಕೆಲಸಗಾರರಿಗೆ ಕಾಯಂಗೊಳಿಸಲು ಅನುಮತಿ ನೀಡಿರುತ್ತದೆ ತಾವುಗಳು ಅದಕ್ಕೋಸ್ಕರ ನಮ್ಮ ಸಂಘದ ಪರವಾಗಿ ಸದನದಲ್ಲಿ ಈ ವಿಷಯದ ಬಗ್ಗೆ ಧ್ವನಿ ಎತ್ತಬೇಕು, ನಮಗೆ ದಿನಗೂಲಿ ಆಧಾರದ ಮೇಲೆ ದಿನಾಲೂ ಕೆಲಸ ನೀಡಬೇಕು ಹಾಗೂ ಜೀವ ವಿಮೆ ಒದಗಿಸಬೇಕು ಮತ್ತು ಎಲ್ಲಾ (ಪಿಆರ್) ಬೆಳೆ ಸಮೀಕ್ಷೆದಾರರಿಗೆ ರೈನ್ ಕೋರ್ಟ್ ನೀಡಬೇಕು ಹಾಗೂ ಗುರುತಿನ ಚೀಟಿ (ಬೂಟ್ ) ಶೂ ನೀಡಬೇಕು
ಈ ಹಿಂದೆ ನಾವುಗಳು ಸಂಬಂಧಪಟ್ಟ ರಾಜ್ಯದ ಎಲ್ಲಾ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಈ ಮಾಹಿತಿ ತಿಳಿಸಿದರೂ ಯಾವುದೇ ರೀತಿಯ ಮಾಹಿತಿ ದೊರಕಿಲ್ಲ ಆದಕಾರಣ ತಾವು ನಮ್ಮ ಭಾಗದ ಶಾಸಕರಾಗಿ ಈ ಮನವಿಯನ್ನು ಕೂಡಲೆ ಪರಿಶೀಲನೆ ಮಾಡಬೇಕೆಂದು ಶ್ರೀ ಪಿ. ರಾಜು ಡಿಫ್ರೆಂಟ್ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ (ರಿ.) ದ ಸಂಸ್ಥಾಪಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇವರು ಮನವಿ ಪತ್ರದಲ್ಲಿ ತಿಳಿಸಿರುತ್ತಾರೆ.

ಬೆಳೆ ಸಮೀಕ್ಷೆದಾರರ
(ಪಿ ಆರ್ )ಬೇಡಿಕೆಗಳು

01- ಒಬ್ಬ ( ಖಾಸಗಿ ನಿವಾಸಿ) 10 ಲಕ್ಷ ಜೀವವಿಮೆ ಒದಗಿಸಬೇಕು.

02 – ಪ್ರತಿ ವರ್ಷ ರೈನ್ ಕೋರ್ಟ್ ಮತ್ತು (ಬೂಟ್) ಶೂ ನೀಡಬೇಕು.

03- ನಮಗೆ ಸೇವಾ ಭದ್ರತೆ ಮಾಡಿ ಕನಿಷ್ಠ ವೇತನ ಮಾಡಿ ಮಂಜೂರಿ ಮಾಡಬೇಕು.

04- ಹೊಲದಲ್ಲಿ ಸಮೀಕ್ಷೆ ಮಾಡುವಾಗ ಯಾವುದೇ ರೀತಿ ಪ್ರಾಣಿ ಮತ್ತು ಪಕ್ಷಿಗಳು ಹಾಗೂ ಕೀಟಗಳು ನಮಗೆ ತೊಂದರೆ ಕೊಟ್ಟ ನಂತರ ನಮಗೆ ಗಾಯವಾದರೆ ಮತ್ತು ಇನ್ನಿತರ ಏನಾದರೂ ತೊಂದರೆಯಾದರೆ ಇದಕ್ಕೆ ಸರ್ಕಾರದಿಂದ ಚಿಕಿತ್ಸೆ ವೆಚ್ಚ ಭರಿಸಬೇಕು.

05- ಪ್ರತಿ ವರ್ಷ ಒಬ್ಬ ( ಪಿಆರ್) ಗೆ ಯಾವುದೇ ರೀತಿಯ ಬದಲಾವಣೆ ಆಗಬಾರದು ಬದಲಾವಣೆ ಎಂದರೆ ಇವರಿಗೆ ತೆಗೆದು ಮತ್ತೊಬ್ಬರಿಗೆ ಹಾಕಬಾರದು ಹಾಕಿದ್ದಲ್ಲಿ ಅದರ ಒಂದು ಸೂಕ್ತ ಮಾಹಿತಿ ಅಧಿಕಾರಿಗಳು ನಮ್ಮ ಗುಂಪಿನ ಅಧ್ಯಕ್ಷ ಮತ್ತು ಸದ್ಯಸರಿಗೆ ಮಾಹಿತಿ ತಿಳಿಸಬೇಕು.

06- ಒಂದು ಪ್ಲಾಟ್ (ಸರ್ವೆ ನಂಬರ್) ಗೆ 20 ರಿಂದ 30 ರೂಪಾಯಿ ಹಣ ಹೆಚ್ಚಾಗಬೇಕು.

07- ಎಲ್ಲಾ (ಪಿಆರ್) ಗಳಿಗೆ ಬೆಳೆ ಸಮೀಕ್ಷೆಯ ಐಡಿ ಕಾರ್ಡ್ ಕಡ್ಡಾಯವಾಗಿ ಕೊಡಬೇಕು.

08- ನಮ್ಮ ಫೋನಿಗೆ ಸರ್ಕಾರದಿಂದ ಒಂದು ಪವರ್ ಬ್ಯಾಂಕ್ ನೀಡಬೇಕು.

09- ಕೃಷಿ ಅಧಿಕಾರಿಗಳ ಕಚೇರಿಯಿಂದ ಟೋಪಿ ಮತ್ತು ಟೀ ಶರ್ಟ್ ಕಡ್ಡಾಯವಾಗಿ ಪಿ ಆರ್ ಗಳಿಗೆ ಕೊಡಬೇಕು.

10- ಬೆಳೆ ಸಮೀಕ್ಷೆ ಕಾರ್ಯ ನಿರ್ವಹಿಸುವಾಗ ನಮಗೆ ಆಯಕ್ತಕರ ಘಟನೆಯಲ್ಲಿ (ಹಾವು ಕಚ್ಚಿ ಅಥವಾ ಯಾವುದೇ ಪ್ರಾಣಿಗಳು ದಾಳಿ ಮಾಡಿ) ಮೃತಪಟ್ಟರೆ ಅವರ ಕುಟುಂಬದ ವಾರುಸುದಾರರಿಗೆ ಅನುಕಂಪ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು.

11- ಪ್ರತಿ ವರ್ಷ ಕೃಷಿ ಇಲಾಖೆಯಿಂದ ಗಣರಾಜ್ಯೋತ್ಸವ ದಿನದಂದು ನಮ್ಮಲ್ಲಿ ಒಬ್ಬ (ಪಿಆರ್) ನ .ಸಮೀಕ್ಷೆ ಕಾರ್ಯವನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಣೆ
( ಬೆಸ್ಟ್ ಪಿಆರ್) ನೀಡಬೇಕು.

12- ನಮಗೆ ಒಂದು ವರ್ಷದಲ್ಲಿ 3 ಬಾರಿ ಮಾತ್ರ ಕೆಲಸ ನೀಡಲಾಗುತ್ತದೆ ಕಾರಣ ನಮಗೆ ಖಾಯಂ ಕೆಲಸ ಕುಡಿಸಬೇಕು ಇಲ್ಲವಾದಲ್ಲಿ ಪ್ರತಿ ತಿಂಗಳಿಗೆ 5 ರಿಂದ 10 ಸಾವಿರ ಸಹಾಯಧನ ನೀಡಬೇಕು.

13- ರಾಜ್ಯದಲ್ಲಿ ನಮ್ಮ .ಪಿ ಆರ್ (ಖಾಸಗಿ ನಿವಾಸಿಗಳು) ಹೊಲದಲ್ಲಿ ಸಮೀಕ್ಷೆ ಮಾಡುವಾಗ ಪ್ರಾಣಿ ಪಕ್ಷಿಗಳು ದಾಳಿ ಮಾಡಿರುತ್ತವೆ ಹಾಗೂ ಹಾವುಗಳು ಕಚ್ಚಿರುತ್ತವೆ ಈ ವಿಷಯ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ .ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು

ಈ ಬೇಡಿಕೆಗಳನ್ನು ತಾವು ನೆರವೇರಿಸದಿದ್ದಲ್ಲಿ ನಾವುಗಳು ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಶ್ರೀ ಪಿ. ರಾಜು ಡಿಫ್ರೆಂಟ್ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ (ರಿ.) ದ ಸಂಸ್ಥಾಪಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ