ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಸುಕ್ಷೇತ್ರ ತಾರಾಪುರ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಗುರು ಸಂಸ್ಥಾನ ಹಿರೇಮಠದ ಮುರುಘರಾಜೇಂದ್ರ ಶಿವಾಚಾರ್ಯ ಪುಣ್ಯ ಸ್ಮರಣೋತ್ಸವ ಹಾಗೂ ತಾರಕೇಶ್ವರ ಲಿಂಗ ಪ್ರತಿಷ್ಠಾಪನೆ ಅಂಗವಾಗಿ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣದಲ್ಲಿ ಬರುವ ಶ್ರೀ ಶರಣಬಸವೇಶ್ವರ ಮದುವೆಯ ಒಂದು ಸನ್ನಿವೇಶಕ್ಕೆ ತಾರಾಪುರ ಗ್ರಾಮದ ಇಬ್ಬರು ಹೆಣ್ಣುಮಕ್ಕಳಿಗೆ ಶ್ರೀ ಶರಣಬಸವೇಶ್ವರ ಹಾಗೂ ಪತ್ನಿ ಮಹಾದೇವಿ ಉಡುಪು ಹಾಕಿ ಮದುವೆಯಲ್ಲಿ ನಡೆಯುವ ಎಲ್ಲಾ ಸಂದ್ರದಾಯವನ್ನು ಶ್ರೀ ಷ, ಬ್ರ, ಗುರುಲಿಂಗ ಶಿವಾಚಾರ್ಯರು ಹಿರೇಮಠ ತಾರಾಪುರ ನೇತ್ರತ್ವದಲ್ಲಿ ಪುರಾಣಕಾರರು ಶ್ರೀ ಡಾಕ್ಟರ್ ವಿವೇಕಾನಂದ ದೇವರು ಕಲ್ಯಾಣ ಹಿರೇಮಠ ಗುಣದಾಳ ಮತ್ತು ಸಮಸ್ತ ತಾರಾಪುರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರ ಸಮ್ಮುಖದಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಮತ್ತು ಶ್ರೀಮತಿ ಮಹಾದೇವಿ ದoಪತಿಗಳ ಮದುವೆ ಕಾರ್ಯಕ್ರಮದಲ್ಲಿ ವರನ ಕಡೆಯಿಂದ ಶ್ರೀ ಮಲ್ಲಿಕಾರ್ಜುನ ಜೋಗುರ ವಧುವಿನ ಕಡೆಯಿಂದ ಶ್ರೀ ಬಸವರಾಜ ಬಿರಾದಾರ ಬೀಗರಾಗಿ ಭಾಗಿಯಾಗಿದ್ದರು.
ವರದಿ. ಹಣಮಂತ ಚ. ಕಟಬರ
