ಪಟ್ಟಣದ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ
ಯಾದಗಿರಿ/ ಗುರುಮಠಕಲ್ : ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿ ಸ್ವಚ್ಛತೆ ಮಾಡಲು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ಬೆಳ್ಳಂ ಬೆಳಿಗ್ಗೆ ಪುರಸಭೆ ಕಾರ್ಯಾಲಯದಿಂದ ಆರಂಭವಾಗಿದ್ದು, ಹಲವು ವರ್ಷಗಳಿಂದ ಸ್ವಚ್ಛತೆಯಾಗದೆ ಮಳೆಗಾಲ ಅಥವಾ ಹೆಚ್ಚಾಗಿ ಮಳೆ ಬಂತೆಂದರೆ ಅಂಗಡಿಗಳ ಒಳಗೆ ನೀರು ಹೊಕ್ಕು ವರ್ತಕರ ಹಿಡಿ ಶಾಪಕ್ಕೆ ಕಾರಣವಾಗುತ್ತಿತ್ತು, ಸಾಕಷ್ಟು ಆರೋಗ್ಯ ಸಮಸ್ಯೆಗಳು ವರ್ತಕರನ್ನು ಸುಮಾರು ವರ್ಷಗಳಿಂದ ಕಾಡುತ್ತಿತ್ತು, ಕಸಕಡ್ಡಿ, ಮಣ್ಣು, ಪ್ಲಾಸ್ಟಿಕ್ ನಿಂದ ತುಂಬಿರುವ ಸರಿ ಸುಮಾರು ಇಪ್ಪತ್ತಕಿಂತ ಹೆಚ್ಚು ವರ್ಷಗಳ ಹಳೆ ಕಾಲದ ಚರಂಡಿಗಳ ಸ್ವಚ್ಛತೆಗೆ ಮುಂದಾಗಿರುವ ಪುರಸಭೆ ಕಾರ್ಯಕ್ಕೆ ವರ್ತಕರು
ಹರ್ಷ ವ್ಯಕ್ತಪಡಿಸಿದ್ದಾರೆ
ಈಗಾಗಲೇ ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ,ಚರಂಡಿ ಸ್ವಚ್ಛತೆ ಹಾಗೂ ದುರಸ್ಥಿ ಕಾರ್ಯಚರಣೆ ಸಿಹಿ ನೀರಿನ ಭಾವಿಯಿಂದ ಸಾಗಿದೆ, ಕಾರ್ಯಚರಣೆಯು ಅಂಗಡಿ ಮಾಲೀಕರ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಜರುಗಿತು.
ವರದಿ: ಜಗದೀಶ್ ಕುಮಾರ್
