
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ತಳವಾರ ಮಹಾಸಭಾ ಅಧ್ಯಕ್ಷ ಶಿವು ಗುರಕಾರ ದಿನಾಂಕ 23/4/2025ರಂದು ವಿಜಯಪುರ ತಳವಾರ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಸೊನ್ನದ ಅವರಿಗೆ ತಮ್ಮ ರಾಜೀನಾಮೆ ಪತ್ರ ಕಳಿಸಿರುವುದಾಗಿ ತಿಳಿಸಿದ್ದಾರೆ. ಸುಮಾರು ವರ್ಷ ಅಧ್ಯಕ್ಷರಾಗಿ ಅನೇಕ ಹೋರಾಟದಲ್ಲಿ ಭಾಗಿಯಾಗಿರುವುದಾಗಿ ತಳವಾರ ಸಮಾಜಕ್ಕೆ ಎಸ್ ಟಿ ಘೋಷಣೆ ಮಾಡುವವರೆಗೆ ಬೆಂಗಳೂರಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ನಮ್ಮ ಆಲಮೇಲ ತಾಲೂಕಿನಿಂದ ರಾಜ್ಯಾದ್ಯಂತ ತಳವಾರ ಸಮಾಜದ ಪ್ರತಿಯೊಂದು ಹೋರಾಟದಲ್ಲಿ ಭಾಗಿಯಾಗಿರುವೆ ಎಂದು ಹೇಳಿದರು. ಶಿವು ಗುರಕಾರ ಈಗ ನಾನು ನನ್ನ ತಳವಾರ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ ಎಂದು ತಿಳಿದ್ದಾರೆ.
ವರದಿ ಹಣಮಂತ ಚ್ ಕಟಬರ
