ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ

ವಿಜಯನಗರ/ ಕೊಟ್ಟೂರು :ಪಟ್ಟಣದ ತುಂಗಭದ್ರ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ವತಿಯಿಂದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಾರ್ವಜನಿಕ ಗ್ರಂಥಾಲಯದಲ್ಲಿ ಹೊಸ ಲೇಖಕರ, ಹೊಸ ಪ್ರಕಾಶಕರ ಮತ್ತು ಹೊಸ ಪುಸ್ತಕಗಳನ್ನು ಪ್ರದರ್ಶನ ಮಾಡಲಾಯಿತು.
ಭಾರತೀಯ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ. ಎಸ್ ಆರ್ ರಂಗನಾಥನ್ ರವರ ಮತ್ತು ಶಾರದಾಂಬೆಯ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಹೂವಿನ ಹಾರ ಹಾಕಿ ಪುಷ್ಪಾರ್ಚನೆ ಮಾಡಲಾಯಿತು.

ಪ್ರತಿವರ್ಷ ಏಪ್ರಿಲ್ 23 ರಂದು ಆಚರಿಸುವಂತೆ 1995ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಯುನೋಸ್ಕೋ ಸಂಸ್ಥೆಯು ಈ ಸಭೆಯಲ್ಲಿ ಈ ದಿನಾಂಕವನ್ನು ಘೋಷಣೆ ಮಾಡಿತು, ಈ ದಿನ ಮಹಾನ್ ಲೇಖಕರಾದ ಇಂಗ್ಲಿಷ್ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ಮತ್ತು ಇತರ ಲೇಖಕರು ಮರಣ ಹೊಂದಿದ ದಿನ ಎಲ್ಲಾ ಲೇಖಕರಿಗೆ ಗೌರವ ನೀಡುವ ಉದ್ದೇಶದಿಂದ ಈ ದಿನದಂದು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಮತ್ತು ಎಲ್ಲಾ ವಿದ್ಯಾರ್ಥಿಗಳು ,ಸಾರ್ವಜನಿಕರು ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ನಿರಂತರವಾಗಿ ಓದಬೇಕೆಂದು ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಪ್ರಾಸ್ತವಿಕವಾಗಿ ಮಾತನಾಡಿದರು.

ಗ್ರಂಥಗಳು ಮನುಷ್ಯನ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ತರುವ ಸ್ನೇಹಿತರಿದ್ದಂತೆ ಎಂದು ಶ್ರೀ ಟಿ ಶ್ಯಾಮರಾಜ ಪ್ರಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಯಾರು ನಿರಂತರವಾಗಿ ಪುಸ್ತಕಗಳನ್ನು ಓದುತ್ತಾರೋ ಅವರು ಎಲ್ಲಿ ಬೇಕಾದರೂ ಉತ್ತಮ ಜೀವನ ನಡೆಸಬಹುದೆಂದು ಮುಖ್ಯ ಅತಿಥಿಗಳಾಗಿ ಶ್ರೀ ಟಿ ಹನುಮಂತಪ್ಪ ವಕೀಲರು ಮಾತನಾಡಿದರು.
ಪುಸ್ತಕಗಳು ಜನರ ಬದುಕಿನಲ್ಲಿ ಬೆಳಕು ನೀಡುತ್ತಾ ಮತ್ತು ಗ್ರಂಥಗಳು ನಿಜವಾದ ಸ್ನೇಹಿತರಿದಂತೆ , ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ಶಕ್ತಿ , ಧೈರ್ಯ , ಏಕಾಗ್ರತೆ ಬರುತ್ತದೆ ನಮ್ಮ ಬದುಕು ಸದಾ ಚಟುವಟಿಕೆಯಿಂದಿರುತ್ತದೆ ಎಂದು ಶ್ರೀ ದೇವರ ಕೊಳದ ಆನಂದ ಶಿಕ್ಷಣ ಸಂಯೋಜಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೂಡ್ಲಿಗಿ ಇವರು ಮಾತನಾಡಿದರು.

ಸತತವಾಗಿ ಪುಸ್ತಕಗಳನ್ನು ಓದುವುದರಿಂದ ಸಮಾಜದ ಸಮುದಾಯದಲ್ಲಿ ಹೆಚ್ಚು ಗೌರವ ದೊರೆಯುತ್ತದೆ ಎಂದು ಶ್ರೀ ಎಸ್ ಕೆ ಗಿರೀಶ್ ಶಿಕ್ಷಣ ಪ್ರೇಮಿಗಳು ಮಾತನಾಡಿದರು.
ಮನೆಯಲ್ಲಿ ಹಿರಿಯರು ಪುಸ್ತಕಗಳನ್ನು ಓದುತ್ತಿದ್ದರೆ ಮಕ್ಕಳು ಮತ್ತು ಇತರರು ಪುಸ್ತಕಗಳನ್ನು ಓದುವುದನ್ನು ಅನುಸರಿಸುತ್ತಾರೆ.

ಮೊಬೈಲ್ ಮತ್ತು ಟಿವಿ ರಿಮೋಟ್ ನ್ನು ಕಾಣದಂತೆ ಬಿಡಬೇಕು ನೋಡಿದರಲ್ಲಿ ಪುಸ್ತಕಗಳು ಕಾಣುವಂತೆ ಇರಬೇಕು ಎಂದು ಶ್ರೀಮತಿ ಗೀತಾ ನಾಗರಾಜ್ ಧಿಯಾಸಪಿಕಲ್ ಸೊಸೈಟಿಯ ಸದಸ್ಯರು ಮಾತನಾಡಿದರು.
ಶ್ರೀಮತಿ ಲತಾ ಸಹಾಯಕ ಪ್ರಾಧ್ಯಾಪಕರು ,
ಶ್ರೀ ಅರವಿಂದ ಬಸಾಪುರ ಸಹಾಯಕ ಪ್ರಾಧ್ಯಾಪಕರು ಹಾಗೂ ಗ್ರಂಥಾಲಯ ಸಿಬ್ಬಂದಿ ಶ್ರೀನಿವಾಸ್ ಪತ್ತಾರ್ ಉಪಸ್ಥಿತರಿದ್ದರು.

ವಿಶ್ವ ಪುಸ್ತಕ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಾರ್ವಜನಿಕ ಗ್ರಂಥಾಲಯದ ಮಹತ್ವ ಎಂಬ ವಿಷಯವನ್ನು ಪ್ರಬಂಧವನ್ನು ಬರೆಸಲಾಯಿತು.

ಇದರಲ್ಲಿ ವಿಜೇತರಾದವರು ವಿದ್ಯಾರ್ಥಿಗಳಲ್ಲಿ ಹೊರಕೇರಿ ಮಹಾದೇವಿ ಪ್ರಥಮ ಸ್ಥಾನ,
ಪಿ. ಕ್ಷಮ ದ್ವಿತೀಯ ಸ್ಥಾನ , ಪಿ ಬಿ ಸ್ವಪ್ನ ಕುಮಾರಿ ತೃತೀಯ ಸ್ಥಾನ, ಎಚ್ಎಮ್ ಐಶ್ವರ್ಯ ಸಮಾಧಾನಕರವಾಗಿ ವಿಜೇತರಾದರು.

ಹಾಗೂ ಸಾರ್ವಜನಿಕವಾಗಿ ವಿಜೇತರಾದವರು ಎ. ಅನಿತ ಪ್ರಥಮ ಸ್ಥಾನಕ್ಕೆ, ಆನಂದ ದ್ವಿತೀಯ ಸ್ಥಾನ, ಹರ್ಷವರ್ಧನ ತೃತೀಯ ಸ್ಥಾನ ಇವರಿಗೆ ಪುಸ್ತಕಗಳನ್ನು ಬಹುಮಾನವನ್ನಾಗಿ ನೀಡಲಾಯಿತು.
ಬಿ. ಕಾವೇರಿ ಸ್ವಾಗತಿಸಿದರು,
ಟಿ ನಾಗಮ್ಮ ಪ್ರಾರ್ಥಿಸಿದರು, ಎಚ್ ರೇಖಾ ಮತ್ತು ಚಂದನ ನಿರೂಪಿಸಿ, ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ