
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಂದ್ರಶೇಖರ ಪುರದ ಗ್ರಾಮದ ಗಂಗಮ್ಮನಬಾವಿ ಸಮೀಪ ಚರಂಡಿ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ ನವಜಾತ ಶಿಶು ಗಂಡು ಮಗುವಿನ ಮೃತದೇಹ ಕಂಡು ಬಂದಿದೆ. ಗ್ರಾಮದಲ್ಲಿರುವ ಜನರು ಬುಧವಾರ ಬೆಳಿಗ್ಗೆ ಸುಮಾರು 6:00 ಗಂಟೆಗೆ ನಡೆದುಕೊಂಡು ಹೋಗುವಾಗ ಅಲ್ಲಿನ ಗ್ರಾಮಸ್ಥರು ಕಾಗೆಗಳ ರಾಶಿಗಳನ್ನು ಕಂಡು ಜನರು ಯಾವುದೋ ಸತ್ತಿರುವಂತಹ ಇಲ್ಲಿ ಹೆಗ್ಗಣ ಇರಬಹುದು ಎಂದು ಭಾವಿಸಿದರು ಸಮೀಪ ಹೋಗಿ ನೋಡಿದ ತಕ್ಷಣ ಗೊತ್ತಾಗಿದ್ದು ಅಲ್ಲಿ ಒಂದು ನವಜಾತ ಶಿಶು ಮೃತ ದೇಹ ಯಾರೋ ಹೆತ್ತವರ ತಪ್ಪಿನಿಂದ ಚರಂಡಿ ಪಾಲು ಆಗಿರುವ ಆ ನವಜಾತ ಶಿಶುವನ್ನು ಗ್ರಾಮಸ್ಥರು ನೋಡಿ ಗುಡೆಕೋಟೆ ಪೊಲೀಸರಿಗೆ ಮಾಹಿತಿ ತಿಳಿದ ನಂತರ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮಗುವನ್ನು ಗುಡೆಕೋಟೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯಕೀಯ ವರದಿಯನ್ನು ಪಡೆದುಕೊಂಡು ಪೋಲೀಸ್ ಇಲಾಖೆಯು ಮುಂದಾಳತ್ವದಲ್ಲಿ ಅನಾಥ ನವಜಾತ ಗಂಡು ಶಿಶುವಿನ ಸಂಸ್ಕಾರವನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಗಂಡು ನವಜಾತ ಶಿಶು ಸುಮಾರು 23ರಿಂದ 25 ವಾರಗಳು ತುಂಬಿರುವ ನವಜಾತ ಶಿಶು ಅವಧಿ ಪೂರ್ವದಲ್ಲಿ ಜನಿಸಿದೆ ಎಂದು ತಿಳಿದು ಬಂದಿದೆ ಗುಡೆಕೋಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಬಿಟ್ಟು ಹೋದ ಮಹಿಳೆಯ ಮೇಲೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
