ಯುದ್ಧಕಾಂಡ ಅಧ್ಯಾಯ 2 (ಕನ್ನಡ)
ನಿರ್ದೇಶಕ: ಪವನ್ ಭಟ್
ಪಾತ್ರವರ್ಗ: ಅಜಯ್ ರಾವ್, ಅರ್ಚನಾ ಜೋಯಿಸ್, ಪ್ರಕಾಶ್ ಬೆಳವಾಡಿ, ಟಿ. ಎಸ್. ನಾಗಾಭರಣ
ಅವಧಿ: 146 ನಿಮಿಷಗಳು
ಕಥಾಹಂದರ: ನ್ಯಾಯಾಲಯದ ಕೋಣೆಯಲ್ಲಿ ಅತ್ಯಾಚಾರಕ್ಕೊಳಗಾದ ತಾಯಿ ಮತ್ತು ಮಗುವಿನ ಕಾನೂನು ಹೋರಾಟಗಳನ್ನು ಈ ಚಿತ್ರ ಅನ್ವೇಷಿಸುತ್ತದೆ.
ಅಜಯ್ ರಾವ್ ನಟಿಸಿ, ನಿರ್ಮಿಸಿದ ಸಿನಿಮಾ ‘ಯುದ್ಧಕಾಂಡ ಚಾಪ್ಟರ್ 2’ ನೋಡುವುದಕ್ಕೆ ದಿನದಿಂದ ದಿನಕ್ಕೆ ಜನರ ಹೆಚ್ಚಾಗುತ್ತಿದ್ದಾರೆ. ಸಮಾಜದ ಗಂಭೀರ ಸಮಸ್ಯೆ ಮೇಲೆ ಬೆಳಕು ಚೆಲ್ಲಿರುವ ಈ ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ. ಸ್ಟಾರ್ಗಿರಿಯನ್ನು ಬಿಟ್ಟು ಸಮಸ್ಯೆಯೊಂದರ ವಿರುದ್ಧ ಹೋರಾಡುವ ಅಜಯ್ ರಾವ್ ಸಿನಿಮಾವನ್ನು ಇಷ್ಟ ಪಡುತ್ತಿದ್ದಾರೆ.
ಅಜಯ್ ರಾವ್ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು. ಸಿನಿಮಾ ಬಿಡುಗಡೆಗೆ ಅಡೆತಡೆಗಳಾಗಿದ್ದರೂ, ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿತ್ತು. ವಿಶೇಷ ಅಂದರೆ, ‘ಯುದ್ಧಕಾಂಡ 2’ ರಿಲೀಸ್ ಆದ ದಿನದಿಂದ ಇಲ್ಲಿವರೆಗೂ ನಿಧಾನಗತಿಯಲ್ಲಿಯೇ ಮುನ್ನುಗ್ಗುತ್ತಿದೆ. ಥಿಯೇಟರ್ನಲ್ಲಿ ಸರಿಯಾಗಿ ಏಳು ದಿನಗಳನ್ನು ಪೂರೈಸಿರುವ ಈ ಸಿನಿಮಾ ಗಳಿಸಿದ್ದೆಷ್ಟು? ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
7 ನೇ ದಿನ ‘ಯುದ್ಧಕಾಂಡ 2’ ಗಳಿಸಿದ್ದೆಷ್ಟು? ಅಜಯ್ ರಾವ್ ‘ಯುದ್ಧಕಾಂಡ 2’ ಟ್ರೇಡ್ ಎಕ್ಸ್ಪರ್ಟ್ಗಳನ್ನು ಗೊಂದಲಕ್ಕೆ ಸಿಲುಕಿದೆ. ಯಾಕಂದ್ರೆ, ಈ ಸಿನಿಮಾ ಹಿಟ್ ಅಂತಲೂ ಹೇಳುವುದಕ್ಕೆ ಆಗುತ್ತಿಲ್ಲ. ಫ್ಲಾಪ್ ಅಂತಲೂ ಹೇಳುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಕಾರಣ ಕಳೆದ ಏಳು ದಿನಗಳಿಂದ ಆಗುತ್ತಿರುವ ಬಾಕ್ಸಾಫೀಸ್ ಕಲೆಕ್ಷನ್. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, ‘ಯುದ್ಧಕಾಂಡ 2’ ಸಿನಿಮಾ ಏಳನೇ ದಿನ 24 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಆರನೇ ದಿನ ಈ ಸಿನಿಮಾ ಕಲೆಕ್ಷನ್ 27 ಲಕ್ಷ ರೂಪಾಯಿ ಆಗಿತ್ತು. ವೀಕ್ ಡೇಸ್ನಲ್ಲೂ ಕಲೆಕ್ಷನ್ ಸ್ಥಿರವಾಗಿರುವುದು ಸಿನಿಮಾ ಮಂದಿಗೆ ಅಚ್ಚರಿ ಮೂಡಿಸಿದೆ.
ಮೊದಲ ದಿನ ₹24 ಲಕ್ಷ
2ನೇ ದಿನ ₹33
ಲಕ್ಷ 3ನೇ ದಿನ ₹30
ಲಕ್ಷ 4ನೇ ದಿನ ₹32
ಲಕ್ಷ 5ನೇ ದಿನ ₹31
ಲಕ್ಷ 6ನೇ ದಿನ ₹27 ಲಕ್ಷ
7ನೇ ದಿನ ₹24 ಲಕ್ಷ
ಒಟ್ಟು ₹2.01 ಕೋಟಿ ವೀಕೆಂಡ್ನಲ್ಲಿ ಹೆಚ್ಚಾಗುತ್ತಾ ಕಲೆಕ್ಷನ್?
‘ಯುದ್ಧಕಾಂಡ 2’ ಸಿನಿಮಾಗೆ ಎರಡನೇ ವೀಕೆಂಡ್ ಶುರುವಾಗಿದೆ. ಮೊದಲ ವೀಕೆಂಡ್ ಹೆಚ್ಚೇನೂ ಲಾಭ ಆಗಿರಲಿಲ್ಲ.ಆದರೆ, ಮೌತ್ ಪಬ್ಲಿಸಿಟಿ ನಿಧಾನವಾಗಿ ಕೆಲಸ ಮಾಡುತ್ತಿರುವ ಹಾಗಿದೆ. ಹೀಗಾಗಿ ಎರಡನೇ ವೀಕೆಂಡ್ನಲ್ಲಿ ‘ಯುದ್ಧಕಾಂಡ 2’ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ. ಈಗಿನಷ್ಟೇ ಕಲೆಕ್ಷನ್ ಆದರೆ, 2.50 ಕೋಟಿಯಿಂದ 2.75 ಕೋಟಿ ಆಗಬಹುದು. ಬಾಕ್ಸಾಫೀಸ್ನಲ್ಲಿ ಚಮತ್ಕಾರ ನಡೆದರೆ, 3 ಕೋಟಿಯಿಂದ 3.50 ಕೋಟಿ ರೂಪಾಯಿವರೆಗೂ ಆಗಬಹುದು.
ಒಟ್ಟಾರೆಯಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡ ನಮ್ಮ ಹೊಸಪೇಟೆಯ ಹುಡುಗ ಮಾಡಿರುವ ಈ ಚಿತ್ರ ಯಶಸ್ವಿಯಾಗಲಿ ಅವರ ಸಾಲವೆಲ್ಲಾ ತೀರಲಿ ಮುಂದೆ ಉತ್ತಮ ಕನ್ನಡ ಚಿತ್ರಗಳು ಅವರ ನಿರ್ಮಾಣ, ನಿರ್ದೇಶನ, ಹಾಗೂ ನಾಯಕರಾಗಿ ನಟಿಸಲಿ ಎಂದು ಶುಭ ಹಾರೈಸೋಣ.
ಪ್ರೇಕ್ಷಕರ ಅಭಿಪ್ರಾಯ
ತಾಯಿ-ಮಗಳ ಉಪ ಕಥಾವಸ್ತುವಿನ ಭಾವನಾತ್ಮಕ ಆಳ ಮತ್ತು ಚಿಕ್ಕ ಹುಡುಗಿಯ ಹೃದಯವಿದ್ರಾವಕ ಕಥೆಯು ಶಾಶ್ವತವಾದ ಪ್ರಭಾವ ಬೀರುತ್ತದೆ.
ಚಿಂತನೆಗೆ ಹಚ್ಚುವ ಸಮಸ್ಯೆಗಳು, ಸೂಕ್ಷ್ಮವಾದ ಅಭಿನಯ ಮತ್ತು ಮನಮುಟ್ಟುವ ನಿರೂಪಣೆಯ ಪರಿಪೂರ್ಣ ಮಿಶ್ರಣವು ಈ ಚಿತ್ರವನ್ನು ಕುಟುಂಬ ಸಮೇತ ವಾರಾಂತ್ಯದ ವೀಕ್ಷಣೆಯನ್ನಾಗಿ ಮಾಡಿ, ಇದು ಉತ್ತಮ ಚಿತ್ರವಾಗಿದೆ.
- ವಿಷ್ಣು ಪ್ರಸಾದ, ಬಳ್ಳಾರಿ.
