ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ಯ 24 -4 -2025 ಗುರುವಾರ ರಂದು ಮೂರನೇ ದಿವಸದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಮಹಾಪುರಾಣ ಜರುಗಿತು. ಈ ದಿನದಂದು ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿದೆ.
ಭಾರತ ದೇಶವು ಆಚಾರ,ವಿಚಾರ, ಸಂಸ್ಕಾರ, ಪರಂಪರೆಯನ್ನು ಒಳಗೊಂಡಿದೆ. ವೀರಶೈವ ಧರ್ಮದಲ್ಲಿ ದೇವನೆ ಮಹಾದೇವನಾಗುವುದು. ತಮ್ಮನ್ನು ಕೆಲಸದಲ್ಲಿ ತಾವೇ ತೊಡಗಿಸಿಕೊಂಡಿರುವ ವೀರಶೈವ ಧರ್ಮದ ವಿಭೂತ ಚರಿತೆಯನ್ನು ಕೇಳುವುದೇ, ನಮ್ಮ ಧರ್ಮದ ಆಚರಣೆಯೇ ಬಹು ಮುಖ್ಯ ಅಂಗ ಮಠಗಳಿರುವುದು ಉತ್ತಮವಾದ ಸಂಸ್ಕಾರ, ಅಧರ್ಮದ ಹಾದಿಯಲ್ಲಿ ನಡೆಯುವವರಿಗೆ, ಧರ್ಮದ ದಾರಿ ತೋರಿಸಿ ಕೊಡುವುದು ಮತ್ತು ಲೋಕದ ಉದ್ದಾರಕ್ಕಾಗಿ ಜನರ ಹಿತಕ್ಕಾಗಿ ಹಿತ ಚಿಂತನೆಗಾಗಿ, ಮಕ್ಕಳಿಗೆ ಸಂಸ್ಕಾರ ಕಲ್ಪಿಸುವಲ್ಲಿ ಪ್ರಮುಖ ಪಾತ್ರವನ್ನು ಮಠಗಳಿಂದ ಸಾಧ್ಯವಾಗುತ್ತದೆ ಎಂದು ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣದಲ್ಲಿ ಶ್ರೀ. ಷ. ಬ್ರ. ಶಾಂತ ಸೋಮನಾಥ ಶಿವಾಚಾರ್ಯರು ಶಾಂತಲಿಂಗೇಶ್ವರ ಮಠ ಟೆಂಗಳಿ, ಮಂಗಲಗಿ ತಮ್ಮ ಆಶೀರ್ವಚನ ನೀಡಿ ಮಾತನಾಡಿದರು.
ಈ ಜನ್ಮದಲ್ಲಿ ನಾವುಗಳು ಸಮಾಜದಲ್ಲಿ ನಮ್ಮದೇ ಆದಂತಹ ಸೇವೆಯನ್ನು ಮಾಡಿ ಈ ಜನ್ಮದ ಪವಿತ್ರತೆಯನ್ನು ಪಡೆದುಕೊಳ್ಳಬೇಕು, ಅದಕ್ಕಾಗಿ ದಾನಗಳಲ್ಲಿ ಶ್ರೇಷ್ಠವಾದದ್ದು ಅನ್ನದಾಸೋಹ. ದಿನಾಂಕ: 24-04- 2025 ಗುರುವಾರದಂದು ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ದಾಸೋಹ ಸೇವೆಯನ್ನು ಗೋವಿಂದ ರೆಡ್ಡಿ ಜಿ ಹೆಡ್ಡಳ್ಳಿ ಕೋಡ್ಲಿ ಇವರು ಮಾಡಿರುತ್ತಾರೆ. ನಂದಿ ಬಸವಣ್ಣನಾಗಿ ಚನ್ನಯ್ಯಪ್ಯಾಟಿಮನಿ ರವರು ಆಗಿದ್ದಾರೆ. ಪುರಾಣಿಕರು ಶ್ರೀ. ವೇ. ಪಂ. ಶಿವಬಸಯ್ಯ ಶಾಸ್ತ್ರಿಗಳು ಕಳ್ಳಿಮಠ ಚಿಣಮಗೇರಾ, ಗಾಯಕರು ಶ್ರೀ ವೇ. ಆನಂದ ಗವಾಯಿಗಳು ಚಿಣಮಗೇರಾ, ತಬಲವಾದ ಕರು ಶ್ರೀ ಮಡಿವಾಳ ಚಿಂಚೋಳಿ ಇದ್ದರು.
ಮೂರನೇ ದಿವಸದ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿರುವ ಶ್ರೀ. ಷ.ಬ್ರ. ಶಾಂತ ಸೋಮನಾಥ ಶಿವಾಚಾರ್ಯರು ಶಾಂತಲಿಂಗೇಶ್ವರ ಮಠ ಟೆಂಗಳಿ, ಮಂಗಲಗಿ, ಶ್ರೀ ಶರಣಬಸವೇಶ್ವರ ಮಹಾಪುರಾಣದ ನೇತೃತ್ವ ವಹಿಸಿರುವ ಶ್ರೀ. ಷ. ಬ್ರ. ಬಸವಲಿಂಗ ಶಿವಾಚಾರ್ಯರು ಶ್ರೀ ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ, ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಶಿವಶರಣಪ್ಪ ಸಜ್ಜನ್ ಶೆಟ್ಟಿ ಕೋಡ್ಲಿ ವೀರಶೈವ ಸಮಾಜ ಮುಖಂಡರು ಕೋಡ್ಲಿ, ಮುಖ್ಯ ಅತಿಥಿಗಳು ಸಂಗಾರೆಡ್ಡಿ ಅನಂತ್ ರೆಡ್ಡಿ ಕೋಡ್ಲಿ, ವೀರಣ್ಣ ಗಂಗಾಣಿ ರೈತ ಮುಖಂಡರು ತಡಕಲ್, ರಾಜಶೇಖರ್ ಗುಡದಾ ವೀರಶೈವ ಸಮಾಜ ಮುಖಂಡರು ರಟಕಲ, ಶರಣು ಭೈರಪ್ಪ ವೀರಶೈವ ಸಮಾಜ ಮುಖಂಡರು ರಟಕಲ, ಮಲ್ಲಿನಾಥ್ ಮುಚ್ಚಟ್ಟಿ ವೀ. ಸ. ಮು. ರಟಕಲ್, ರೇವಣಸಿದ್ದಪ್ಪ ವಜ್ಜರಗಿ ವೀ. ಸ. ಮು. ಕೋಡ್ಲಿ, ಸಿದ್ದಪ್ಪ ಪಿ ಹಲಕಟ್ಟಿ, ವೀ. ಸ. ಮು. ಕೋಡ್ಲಿ, ಖತಲಯ್ಯ ಗುತ್ತೇದಾರ್ ಅಧ್ಯಕ್ಷರು ಈಡಿಗ ಸಮಾಜ ಕೋಡ್ಲಿ, ಕಾಂತಪ್ಪ ರಟಕಲ್ ಉಪಾಧ್ಯಕ್ಷರು ಪ್ರಾ. ಕೃ. ಪ. ಸ. ಸಂಘ ಕೋಡ್ಲಿ, ಮಹಾದೇವಿ ಮಲ್ಲಣ್ಣ ತಾಂಡೂರ್ , ಚನ್ನಬಸಯ್ಯ ಕುಡ್ದಳ್ಳಿ ಕಾರ್ಯದರ್ಶಿ ಪಿ ಕೆ ಪಿ ಎಸ್ ಕೋಡ್ಲಿ, ಸಿದ್ದಣ್ಣಾ ಕಲ್ಲೂರ್ ಚನ್ನೂರ್, ಶಾಂತಿವೀರ ಹುಲಿ ಚನ್ನೂರ್, ವೀರಶೆಟ್ಟಿ ಹುಲಿ ಚನ್ನೂರ, ಆನಂದ್ ಮಾ. ಪಾಟೀಲ್ ಚನ್ನೂರ್, ಶ್ರೀಕಾಂತ್ ಕಲ್ಲೂರ್ ಚನ್ನೂರ್, ಶರಣಪ್ಪ ಕಾಳಗಿ ಶಿಕ್ಷಕರು ಚನ್ನೂರ, ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾಪೂರಾಣ ಕಾರ್ಯಕ್ರಮದಲ್ಲಿ ಪ್ರಸಾದ ವಿತರಣೆ ಭೂಮಿಕಾ ಮಹಿಳಾ ಸ್ವ. ಸಹಾಯ ಸಂಘ ಕೋಡ್ಲಿರವರು ವ್ಯವಸ್ಥೆ ಮಾಡಿದರು. ಶಂಕರ್ ಕಣ್ಣಿ ಶಿಕ್ಷಕರು ಕೋಡ್ಲಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್
