ಕಲಬುರಗಿ: ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಧಾಮದ ಮೇಲೆ ಏ. 22 ರಂದು ಉಗ್ರರು ಗುಂಡಿನ ದಾಳಿ ನಡೆಸಿರುವುದು ಖಂಡನೀಯವಾಗಿದೆ. ಇಸ್ಲಾಮಿಕ್ ಮನಸ್ಥಿತಿಯ ಉಗ್ರರು ಹಿಂದುಗಳ ಹೆಸರನ್ನು ಅವರನ್ನು ಗುಂಡೇಟಿನಿಂದ ಕೊಂದಿರುವುದು ಹೇಯ ಕೃತ್ಯವಾಗಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಉತ್ತರ ಕರ್ನಾಟಕ ವಕ್ತಾರ ಆನಂದ ತೆಗನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಭಯೋತ್ಪಾದಕರ ಈ ಭೀಕರ ದಾಳಿಯನ್ನು ಇಡೀ ದೇಶದ ಜನತೆ ಒಕ್ಕೊರಲಿನಿಂದ ಬಲವಾಗಿ ಖಂಡಿಸುತ್ತಿದ್ದಾರೆ. ಈ ದುರ್ಘಟನೆಯಲ್ಲಿ ಸಾವಿಗೀಡಾದವರಿಗೆ ತೀವ್ರ ಸಂತಾಪ ಸೂಚಿಸುತ್ತಾ ಗಾಯಗೊಂಡವರು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಈ ಘೋರ ಕೃತ್ಯದ ಹಿಂದಿರುವ ಎಲ್ಲಾ ದುಷ್ಟ ಶಕ್ತಿಗಳನ್ನು ಸದೆಬಡಿಯುವಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಾಗಿದೆ. ದೇಶ ರಕ್ಷಣೆಯ ವಿಚಾರದಲ್ಲಿ ಪಕ್ಷ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ರಾಷ್ಟ್ರದ ರಕ್ಷಣೆಗೆ ನಿಲ್ಲಬೇಕು. ಘಟನೆಯಿಂದ ಅಮಾಯಕರ ಜೀವಗಳನ್ನು ಬಲಿಯಾಗುವುದರೊಂದಿಗೆ ಅನೇಕ ಕುಟುಂಬಗಳನ್ನು ಧ್ವಂಸಗೊಂಡಿವೆ. ಇಂತಹ ಹಿಂಸಾಚಾರಗಳು ಸಂಪೂರ್ಣವಾಗಿ ಅಮಾನವೀಯವಾಗಿದ್ದು, ನ್ಯಾಯ, ಘನತೆ ಮತ್ತು ಶಾಂತಿಯನ್ನು ಬಯಸುವ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಹಿಂಸಾಚಾರದಿಂದ ಉಂಟಾಗುವ ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆಗುವ ಗಾಯವಾಗಿದೆ ಎಂದಿದ್ದಾರೆ.
- ಕರುನಾಡ ಕಂದ
