ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಪ್ಪಟ ಕನ್ನಡತಿ ಕಸ್ತೂರಿ ಪಟಪಳ್ಳಿ

ಅಪ್ಪಟ ಕನ್ನಡತಿ ಕನ್ನಡ ಕಾರ್ಯಕ್ರಮದ ಕ್ರೀಯಾಶೀಲ ಅತ್ಯದ್ಭುತ ನಿರೂಪಣೆ ಮಾಡುವಲ್ಲಿ ಸೈ ಏನಿಸಿಕೊಂಡವರು ಶ್ರೀಮತಿ ಕಸ್ತೂರಿ ಪಟಪಳ್ಳಿಯವರು, ಇವರು ಯಡ್ರಾಮಿ ಊರಿನ ಪರಿಸರದಲ್ಲೇ ಬಾಲ್ಯವನ್ನು ಕಳೆದವರು, ತವರು ನೆಲದ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿರುವ ಕಸ್ತೂರಿಯವರು
ಹಪ್ತಿ ಮನೆತನದ ತಾಯಿ ಶ್ರೀಮತಿ ಸುಶೀಲಾಬಾಯಿ ತಂದೆ ಶ್ರೀ ಬಸವರಾಜ ದಂಪತಿಗಳ ಮಗಳಾಗಿ ತೊಗರಿ ನಾಡು ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ಎಂಬ ಊರಲ್ಲಿ ದಿ. ೧. ೭. ೧೯೭0ರಲ್ಲಿ ಜನಿಸಿದರು.
ಬಾಲ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಲ್ಲೆ ಮುಗಿಸಿ, ಪಿ. ಯು. ಸಿ. ವಿದ್ಯಾಭ್ಯಾಸ ಮುಗಿಸಿದ ನಂತರ ಕಲ್ಬುರ್ಗಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿ ದರು.
ವೃತ್ತಿಯಲ್ಲಿ ಕೆಲವು ದಿವಸ ಅರೆಕಾಲಿಕ ಉಪನ್ಯಾಸಕರಾಗಿ, ಸೇವೆ ಸಲ್ಲಿಸಿ ತದ ನಂತರ ೧೯೯೮ ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಹೈಸ್ಕೂಲ್ ಶಿಕ್ಷಕರಾಗಿ, ಸಿ. ಆರ್. ಪಿ ಮತ್ತು ಎಂ ಆರ್ ಪಿಯಾಗಿ ಜಿಲ್ಲಾ ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಯಿಂದ ಶಿಕ್ಷಕರಾದರೂ, ಬಾಲ್ಯದಿಂದಲೇ ಬರೆಯುವ ಓದುವ ಗೀಳನ್ನು ಹಚ್ಚಿಕೊಂಡಿರುವ ಕಸ್ತೂರಿಯವರು ಪ್ರವೃತ್ತಿಯಲ್ಲಿ ಕಥೆ, ಕವನ, ಕಾದಂಬರಿ ಮತ್ತು ಬಿಡಿಲೇಖನಗಳು ಬರೆಯುವ ಮೂಲಕ ಒಬ್ಬ ಸೃಜನ ಶೀಲ ಉತ್ತಮ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಎಸ್ ಎಲ್ ಭೈರಪ್ಪನವರ “ತಂತು ಒಂದು ಸಾಂಸ್ಕೃತಿಕ ಅಧ್ಯಯನದ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಣೆಗೊಂಡ ಶಿಕ್ಷಣ ಪ್ರೇಮಿ ಅಬ್ದುಲ್ ಖದಿರವರ ಕುರಿತು ಪುಸ್ತಕದ ಮುಖ್ಯ ಸಂಪಾದಕರಾಗಿದ್ದು ಶ್ರೀಮತಿ ಕಸ್ತೂರಿಯವರು ಕವಿತೆ ಲೇಖನಗಳು ವಿವಿಧ ಪ್ರಕಾರ ಸಾಹಿತ್ಯ ಚುಟುಕುಗಳು ಪ್ರಕಟಿಸಿರುವ ಇವರ ಲೇಖನಗಳು ಮತ್ತು ಚುಟುಕುಗಳು ಹಲವಾರು ದಿನಪತ್ರಿಕೆ ಮತ್ತು ಅನೇಕ ಸ್ಮರಣೆ ಸಂಚಿಕೆ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟಣೆ ಗೊಂಡಿರುತ್ತವೆ.

ಇವರ ತವರೂರಾದ ಯಡ್ರಾಮಿ ಬಗ್ಗೆ ಹೇಳುವುದಾದರೆ ಇದು ಐತಿಹಾಸಿಕವಾದ ಊರಾಗಿದೆ. ಯಡ್ರಾಮಿ ಸೀಮೆಗೆ ಮೊಗಲಾಯಿ ಸೀಮೆ ಅನ್ನುವ ವಾಡಿಕೆಯಿದೆ. ನಮ್ಮ ಬೀದರ ಜಿಲ್ಲೆಯ ಗೊರಟ ಗ್ರಾಮದಂತೆ ಯಡ್ರಾಮಿ ಕೂಡಾ ರಜಾಕಾರರ ಹಾವಳಿಯಿಂದಾಗಿ ಈ ಊರು ಸಾಕಷ್ಟು ಹಾನಿಯಾಗಿದೆ.
ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ಯಡ್ರಾಮಿ ದೊಡ್ಡಾಟದ ತವರು ಜಿಲ್ಲೆಯಾಗಿದ್ದು ಇಲ್ಲಿ ಅಲಾಯಿ ಪದ, ಹಂತಿ ಪದ, ಏಕತಾರಿ ಚಿನ್ನಿ ತಾಳ ಭಜನೆ ಪದಗಳು ಹಾಡುವ ಕಲಾವಿದರ ಸಂಗಮವೂ ಕೂಡಾ ಆಗಿದೆ.

ಶ್ರೀಮತಿ ಕಸ್ತೂರಿಯವರು ಶಿಕ್ಷಣ ಕ್ಷೆತ್ರದಲ್ಲಿ ಸೇವೆ ಸಲ್ಲಿಸುವ ಜೊತೆ ಜೊತೆಗೆ ಬಹಳ ವರುಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿಧ ಕನ್ನಡ ಪರ ಸಂಘಟನೆಯಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡ ಇವರು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ತಮ್ಮ ಅವಧಿಯಲ್ಲಿ ಸಾಹಿತ್ಯ ಸೌರಭ ರೀತಿಯಲ್ಲಿ “ಜಾಹೀರಾತಿನಲ್ಲಿ ಮಹಿಳೆ ” ಹಾಗೂ “ಬೇಂದ್ರೆಯವರ ಸಾಹಿತ್ಯದಲ್ಲಿ ಸ್ತ್ರೀ” ಅನ್ನುವ ಲೇಖನ ಮತ್ತು ಇವರ ೨೫ ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ತಮ್ಮದೇ ಸಂಪಾಕತ್ವದಲ್ಲಿ “ತ್ಯಾಗಮಯಿ” ಕಥಾ ಸಂಕಲನ ಪ್ರಕಟಣೆ ಮಾಡಿರುವದರ ಜೊತೆಗೆ ಜಿಲ್ಲಾ ವಿಜ್ಞಾನ ಪರಿಷತ್ ಮಹಿಳಾ ನಿರ್ದೇಶಕರಾಗಿ, ಅಖಿಲ ಭಾರತೀಯ ವಚನ ಸಾಹಿತ್ಯದ ಕೇಂದ್ರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದರೊಂದಿಗೆ ಪ್ರಸ್ತುತವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಜೊತೆಗೆ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಉಪನ್ಯಾಸಕರಾಗಿ ನಿರೂಪಕರಾಗಿ, ಅತಿಥಿಯಾಗಿ, ಸಕ್ರಿಯವಾಗಿ ಭಾಗವಹಿಸುವ ಇವರ ಸರಳತೆ, ಮೃದು ಸ್ವಭಾವದ ಎಲ್ಲರ ಜೊತೆ ನಗುನಗುತಾ ಲವಲವಿಕೆಯಿಂದ ಬೆರೆಯುವ ಇವರ ಸರಳತೆ ಮೆಚ್ಚುವಂತಹದು.

ಶ್ರೀಮತಿ ಕಸ್ತೂರಿಯವರ ಸಹಪಾಠಿಯಾದ ನಮ್ಮ ಬೀದರ ಜಿಲ್ಲೆಯವರೇ ಆದ ಶ್ರೀಮತಿ ವಿದ್ಯಾವತಿ ಬಲ್ಲೂರ ಮತ್ತು ಬಸವರಾಜ ಬಲ್ಲೂರವರ ಒಡನಾಟ ಹೊಂದಿರುವ ಇವರು ಬೀದರ ಬೆಳ್ಳೂರ ಗ್ರಾಮದ ಶ್ರೀ ಶಿವಕುಮಾರರವರೊಂದಿಗೆ ವಿವಾಹವಾದರು ಆ ಕಾರಣಕ್ಕಾಗಿ ಯಡ್ರಾಮಿ ಕಸ್ತೂರಿಯವರ ತವರು ಮನೆಯಾದರೆ, ಬೀದರ ಗಂಡನ ಮನೆಯಾಗಿಸಿ ರಾಕೇಶ ಮತ್ತು ಕಾರ್ತೀಕ ಅನ್ನುವ ಎರಡು ಮಕ್ಕಳ ತಾಯಿಯಾಗಿ ಶಿವಕುಮಾರರವರ ಬಾಳಸಂಗಾತಿಯಾಗಿ, ಶಿಕ್ಷಕಿಯಾಗಿ, ಕವಿತ್ರಿಯಾಗಿ ಬದುಕಿನ ಬಂಡಿಯನ್ನು ಯಶಸ್ವಿಯಾಗಿ ಸಾಗಿಸುತ್ತಿರುವ ಇವರ ಶಿಕ್ಷಣ ಸೇವೆ ಹಾಗೂ ಕನ್ನಡ ಸೇವೆಯನ್ನು ಗುರುತಿಸಿ ಬೀದರ ಜಿಲ್ಲಾಢಳಿತ ಸೇರಿದಂತೆ ಹಲವಾರು ಕನ್ನಡಪರ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರ
೧: ಜಿಲ್ಲಾ ಮಟ್ಟದ ರಾಷ್ಟ್ರ ನಿರ್ಮಾಣ ಶಿಕ್ಷಕ ಪ್ರಶಸ್ತಿ (೨೦೧0)
೨: ರಾಜ್ಯೋತ್ಸವ ಪ್ರಶಸ್ತಿ (ಜಿಲ್ಲಾಢಳಿತ ಬೀದರ ೧೯೯0)
೩:ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (ರೋಟರಿ ಕ್ಲಬ್ ಬೀದರ )
೪:ಸಂಘಟನಾ ಶಿಕ್ಷಕ ಪ್ರಶಸ್ತಿ (ಚಿತ್ರದುರ್ಗ ಮಠ)
೫:ಕಾವ್ಯ ರತ್ನ ಕೋಗಿಲೆ ಪ್ರಶಸ್ತಿ
೬:ಸಾಹಿತ್ಯ ಚೂಡಾಮಣಿ ಪ್ರಶಸ್ತಿ
೭:ಡಾ. ಬಿ. ಆರ್. ಅಂಬೇಡ್ಕರ ಪ್ರಶಸ್ತಿ,
೮:ಆದರ್ಶ ದಂಪತಿಗಳು ಪ್ರಶಸ್ತಿ
ಮತ್ತು ಇನ್ನಿತರ ಸಂಘ ಸಂಸ್ಥೆಗಳ ಪುರಸ್ಕಾರ ಗೌರವಕ್ಕೆ ಪಾತ್ರರಾಗಿರುವ ಶ್ರೀಮತಿ ಕಸ್ತೂರಿ ಪಟಪಳ್ಳಿಯವರು ಬೆಮಳಖೇಡ ಗ್ರಾಮದ ಕನ್ನಡ ಭಾಷೆ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ತಮ್ಮ ಸಾಹಿತ್ಯ ಸೇವೆಯನ್ನು ಮುಂದುವರೆಸಿರುವ ಇವರ ಸೇವೆ ಅನನ್ಯವಾಗಿದೆಯಂದು ಹೇಳಬಹುದು
.

  • ಓಂಕಾರ ಪಾಟೀಲ ,ಕಾರ್ಯದರ್ಶಿಗಳು,
    ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ
    ಮೊ :೬೩೬೦೪೧೩೯೩೩
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ