
ವಿಜಯನಗರ / ಕೂಡ್ಲಿಗಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಹತ್ಯೆಯನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ, ತೀವ್ರವಾಗಿ ಖಂಡಿಸಿದೆ. ಮತ್ತು ಹತ್ಯೆಯಲ್ಲಿ ಅಗಲಿದವರಿಗೆ, ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ಏ. 24 ರಂದು ಸಂಜೆ ಪಟ್ಟಣದ ಮದಕರಿ ವೃತ್ತದಲ್ಲಿ, ಸಂಘ ಪರಿವಾರದವರು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಮೇಣದಬತ್ತಿ ಹಚ್ಚಿ ಕ್ಷಣ ಹೊತ್ತು ಮೌನಾಚರಣೆ ಮಾಡೋ ಮೂಲಕ, ಮಡಿದವರ ಅಗಲಿಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಹಾಗೂ ಭಜರಂಗದಳದ ಮುಖಂಡರು ಮಾತನಾಡಿ ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು, ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡಬೇಕು ಮತ್ತು ದೇಶ ದ್ರೋಹಿ ಜಿಹಾದಿಗಳನ್ನು ದೇಶದಿಂದ ತೊಲಗಿಸಬೇಕು, ಘಟನೆಗೆ ಕಾರಣವಾದ ಉಗ್ರರನ್ನು ಶೀಘ್ರವೇ ಹತ್ಯೆಗೈಯ್ಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಮುಖಂಡರಾದ ಅನಂತ ಪದ್ಮನಾಭ ಶೆಟ್ರು, ಬಂಡ್ರಿ ವಿಜಯಕುಮಾರ ಶೆಟ್ರು, ರಾಮು ಕಾಟ್ವಾ, ಬಳಿಗೇರ ಬಸವರಾಜಪ್ಪ, ತಾಳಸ ತಿಪ್ಪೇಸ್ವಾಮಿ, ಜಿ.ಬಿ.ದುರುಗೇಶ, ಸ್ವಾಮಿ ವಿವೇಕಾನಂದ, ತೂಗದಲಿ ರಾಘವೇಂದ್ರ, ಸಂತೋಷ ಮಿಸ್ಕಿನ್, ವೆಂಕಟೇಶ, ವಕೀಲರಾದ ಬಣಕಾರ ಶಿವಕುಮಾರ, ಭೀಮಪ್ಪ , ಸಂತೋಷ ಪಾಟೀಲ, ಜಿ.ಸಿದ್ದಪ್ಪ, ಗುರುರಾಜ , ಸತೀಶ ಕುಮಾರ, ಕಂಬಾರ ಹೊನ್ನೂರಪ್ಪ ಸೇರಿದಂತೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕೂಡ್ಲಿಗಿ ಶಾಖೆಯ ನೂರಾರು ಕಾರ್ಯಕರ್ತರು ಹಾಗೂ ಸಂಘ ಪರಿವಾರದವರು ಭಾಗಿಯಾಗಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
