
ಯಾದಗಿರಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ತರಕಸ್ಪೇಟ್ ನಲ್ಲಿ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮಕ್ಕೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ರಸೀದ್ ಪಟೇಲ್ ಹಾಗೂ ಮೈಮದ್ ಆಲಮ ಶಾಲೆಯ ಮುಖ್ಯ ಗುರುಗಳು ಶ್ರೀ ಸೋಮಶೇಖರ ಮತ್ತು ಅತಿಥಿ ಶಿಕ್ಷಕಿ ಸುಜಾತ ಮತ್ತು ಪಾಲಕರು ಪೋಷಕರು ಊರಿನ ಶಿಕ್ಷಣ ಪ್ರೇಮಿ ಶ್ರೀ ಮಲ್ಲಿಕಾರ್ಜುನ್ ಸ. ಶಳ್ಳಗಿ ಮತ್ತು ಶಾಲೆಯ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.
ಎಲ್. ಎಲ್. ಎಫ್ ಸಂಸ್ಥೆಯ ಹಿರಿಯ ಸಂಪನ್ಮೂಲ ಶಿಕ್ಷಕರಾದ ಚಂದ್ರು ಅವರು ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದರು ನಂತರ PASD ಶಿವಾನಂದ ಬೇಸಿಗೆ ಶಿಬಿರದ ಕುರಿತು ಮಾತನಾಡಿದರು. ಶಾಲೆಯ ಮುಖ್ಯ ಗುರುಗಳು ಆಟದ ಜೊತೆ ಪಾಠವೂ ಬಹಳ ಮುಖ್ಯ ಎಂದು ತಿಳಿಸಿದರು. 8ನೇ ತರಗತಿ ವಿದ್ಯಾರ್ಥಿನಿ ನಾಗಮ್ಮ ಸಂಗಡಿಗರಿಂದ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದ ನಿರೂಪಣೆ ಶಶಿಕುಮಾರ್ ಅವರು ನಡೆಸಿಕೊಟ್ಟರು ಸ್ವಾಗತ ಭಾಷಣ ಕಾವೇರಿ ಮೇಡಂ ನೇಡಿಸಿಕೋಟ್ಟರು ಕಾರ್ಯಕ್ರಮದ ಅಂತಿಮ ಘಟ್ಟ ಸುನಿತಾ ಮೇಡಂ ವಂದನೆಗಳನ್ನು ತಿಳಿಸಿದರು. ನಂತರ ಶಾಲೆಯ ಮುಖ್ಯ ಗುರುಗಳು ವತಿಯಿಂದ ಎಲ್ಲಾ ಮಕ್ಕಳಿಗೆ ಸಿಹಿಯನ್ನು ಹಂಚಿದರು.
LLF ಸಂಸ್ಥೆಯ ಈ ಯುಗದ ಪೀಳಿಗೆಗೆ ನೀಡುವ ಸಂದೇಶ ಮೊಬೈಲ್ ಎನ್ನುವ ಒಂದು ಚಟ ಬಿಟ್ಟು ಆಟ ಪಾಠದ ಕಡೆ ಮಹತ್ವ ನೀಡಿ ವಿದ್ಯೆಯನ್ನು ಖಾಲಿಯಾಗದ ಸಂಪತ್ತನ್ನು ಗಳಿಸಿ ಎಂದು ಸ.ಹಿ.ಪ್ರಾ, ಶಾಲೆ ತರಕಸ್ಪೇಟ್ ಸಂಪನ್ಮೂಲ ಶಿಕ್ಷಕ ಶಶಿಕುಮಾರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.
- ಕರುನಾಡ ಕಂದ
