ಚಿಕ್ಕಮಗಳೂರು/ ಶೃಂಗೇರಿ: ಕ್ಷೇತ್ರದ ಶಾಸಕರಾಗಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ ರಾಮಯ್ಯ ಶೃಂಗೇರಿ ಕ್ಷೇತ್ರ ಕಂಡ ಅಪರೂಪದ ರಾಜಕಾರಣಿ.
ಕೆ. ಎನ್. ವೀರಪ್ಪ ಗೌಡರ ಎದುರಿಗೆ ಪ್ರಚಂಡ ಮತಗಳಿಂದ ಗೆದ್ದ ರಾಮಯ್ಯ ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿದ್ದರು ಮಲೆನಾಡು ಭಾಗದಲ್ಲಿ ಬೋರವೆಲ್ ರಾಮಯ್ಯ ಎಂದೇ ಜನಪ್ರಿಯರಾದರು.
ಶ್ರೀಯುತರ ಮಗಳು ಶ್ರೀಮತಿ ಆರತಿ ಕೃಷ್ಣ ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುತ್ತಾರೆ. ಆರತಿ ಕೃಷ್ಣ ರವರಿಗೆ ಸಹ್ಯಾದ್ರಿ ಸಂಘ ಅಭಿನಂದಿಸಿದ ಸಂದರ್ಭದಲ್ಲಿ ಇವರ ಒಡನಾಟ ಹೊಂದಿದ್ದೆವು. ತದನಂತರ ರಾಜಕೀಯದಲ್ಲಿ ಮುಖ್ಯವಾಹಿನಿಯಲ್ಲಿ ಕಾಣಿಸಿಲ್ಲ.
ಮಲೆನಾಡು ಒಬ್ಬ ಪ್ರತಿಭಾವಂತ ರಾಜಕೀಯ ನಾಯಕನನ್ನು ಕಳೆದುಕೊಂಡಿದೆ, ಶ್ರೀಯುತರ ನಿಧನಕ್ಕೆ ಸಹ್ಯಾದ್ರಿ ಸಂಘ ಭಾವಪೂರ್ಣ ಶ್ರದ್ಧಾಂಜಲಿಯ ಸಲ್ಲಿಸುತ್ತದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
