ಬಳ್ಳಾರಿ / ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾರ್ಕಿಂಗ್ ಫೀ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಜರುಗಿತು.
2025ರ ಮೇ. 1ರಿಂದ 2026ರ ಮಾರ್ಚ್ 31ವರೆಗಿನ ಒಂದು ವರ್ಷದ ಹರಾಜು ಪ್ರಕ್ರಿಯೆ ನಡೆಸಲಾಯಿತು. ಇಲ್ಲಿ ನಡೆದ ದಿನದ ಮಾರುಕಟ್ಟೆ ಹರಾಜಿನಲ್ಲಿ ಯು. ಪರಮೇಶ್ವರಪ್ಪ ಇವರಿಗೆ ಸುಮಾರು 3 ಲಕ್ಷ ರೂ.ಗಳ ಬಿಡ್ ಆಗಿದೆ ಮತ್ತು ಯು. ಪರಮೇಶ್ವರಪ್ಪ ಇವರು ಸುಮಾರು 1.5 ಲಕ್ಷಕ್ಕೆ ವಾರದ ಮಾರುಕಟ್ಟೆ ಹರಾಜು ಪಡೆದುಕೊಂಡರು. ನಂತರದ ಪಾರ್ಕಿಂಗ್ ಹರಾಜಿನಲ್ಲಿ ಎಂ.ಜಾವೀದ್ ಇವರು 75 ಸಾವಿರದ ಹರಾಜು ತನ್ನದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಡಾ.ವಿ.ಎಲ್.ಬಾಬು, ಕಂದಾಯ ಅಧಿಕಾರಿ ನಾಗಭೂಷಣ, ಕಂದಾಯ ನಿರೀಕ್ಷಕರಾದ ಬರಮಣ್ಣ, ಜಯಲಕ್ಷ್ಮಿ ಹಾಗೂ ಬಿಡ್ದಾರರಾದ ಬಿ. ದೇವೇಂದ್ರ, ಬಿ.ಇಮ್ರಾನ್, ಇಸ್ಮಾಯಿಲ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
