ಬಾಗಲಕೋಟ /ಬಾದಾಮಿ : ಇಂದು ಬಾದಾಮಿಯಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ರ್ರ್ಯಾಲಿ ಮಾಡಲಾಯಿತು.
ವಕ್ಪ್ ತಿದ್ದುಪಡಿಯು, ವಕ್ಪ್ ಆಸ್ತಿಯ ಹಕ್ಕು
ನ್ಯಾಯದ ಸಿದ್ದಾಂತಕ್ಕೆ ವಿರುದ್ಧವಾಗಿದೆ.
ಒಂದು ನಿರ್ದಿಷ್ಟ ಕೋಮಿಗೆ ಗುರಿಯಾಗಿಸಿ
ಕಾನೂನು ರಚಿಸಿದ್ದರಿಂದ ಅನ್ಯಾಯ ಆಗಿರುವದನ್ನು ಖಂಡಿಸಿ ಇಲ್ಲಿಯ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು
ಸಂಖೆಯಲ್ಲಿ ಮುಸಲ್ಮಾನ ಬಂಧುಗಳು
ಭಾಗಿಯಾಗಿದ್ದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸುಫ್ ಪೀರಜಾದೆ ಮಾತನಾಡಿ ವಕ್ಪ್ 2025 ರ
ತಿದ್ದುಪಡಿಯನ್ನು ಹಿಂಪಡೆಯಬೇಕು.
ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಹಕ್ಕು,ಭದ್ರತೆ ಮತ್ತು ನ್ಯಾಯ ಸಿಗುವಂತೆ
ಕಾನೂನು ರಚಿಸಬೇಕು. ಹಳೆಯ ವಕ್ಪ್ ಆಸ್ತಿಗಳನ್ನು ಹಾಗೆ ಉಳಿಸಬೇಕು ಯಾವುದೆ
ಧರ್ಮದ ಧಾರ್ಮಿಕ ಮಂಡಳಿಗಳಲ್ಲಿ ಹಾಗೂ
ಸಂಸ್ಥೆಗಳಲ್ಲಿ ಅನ್ಯ ಧರ್ಮೀಯರ ಹಸ್ತಕ್ಷೇಪವನ್ನು ಕೊನೆಗೊಳಿಸಬೇಕು ಎಂದು ಮನವಿಯಲ್ಲಿ ನಮೂದಿಸಿ ಮನವಿ ಕೊಟ್ಟರು.
ವರದಿ.ಅಬ್ದುಲಸಾಬ ನಾಯ್ಕರ
