ಯಾದಗಿರಿ/ಗುರುಮಠಕಲ್: ಬೇಸಿಗೆ ಬಿಸಿಲಿನ ತಾಪಕ್ಕೆ ಜನ ಸಾಮಾನ್ಯರು ಬಾಯಾರಿಕೆಯಿಂದ ಬಳಲಬಾರದು ಎನ್ನುವ ಸುದುದ್ದೇಶದಿಂದ ಇಂದು ಗುರುಮಠಕಲ್ ಪುರಸಭೆ ಕಾರ್ಯಾಲಯದ ವತಿಯಿಂದ ಮಹಾತ್ಮ ಬಸವೇಶ್ವರ ಕೃಷಿ ಮಾರುಕಟ್ಟೆ ಮುಂಭಾಗದಲ್ಲಿ ಮತ್ತು ಕನಕದಾಸ ವೃತ್ತದ ಹತ್ತಿರ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾ ಪಡಿಗೆ ಅವರು ಕುಡಿಯುವ ನೀರಿನ ಅರವಟ್ಟಿಗೆ ಸಾರ್ವತ್ರಿಕವಾಗಿ ಚಾಲನೆ ಮಾಡಿದರು.
ಇನ್ನೂ ಪಟ್ಟಣದ ಎರಡು ಮೂರು ಕಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೋತಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ, ಪರಶುರಾಮ ನರಬೋಳ, ಅಶೋಕ್, ನರಸಿಂಹಲು ಯಾದವ್, ಸಲ್ಲವುದ್ದೀನ್, ವಿವಿಧ ಪಕ್ಷದ ಮುಖಂಡರಾದ ರಘುನಾಥ ರೆಡ್ಡಿ ಪಾಟೀಲ, ಚಂದೂಲಾಲ್ ಚೌಧರಿ, ಅಂಬಾದಾಸ ಜೀತ್ರಿ, ಫೈಯಾಜ್ ಅಹಮದ್, ಲಾಲಪ್ಪ ತಲಾರಿ ಹಾಗೂ ಸಾರ್ವಜನಿಕರು ಸಾಕ್ಷಿಯಾದರು.
ವರದಿ: ಜಗದೀಶ್ ಕುಮಾರ್
