ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ದಿ: 16.04.2025 ರಂದು ಸುರಿದ ಭಾರೀ ಗಾಳಿ, ಮಳೆಗೆ ಕಂದಗಲ್ ಗ್ರಾಮದ ಕೆ. ನಂಜಪ್ಪ ತಂದೆ ಸೋಗೀರಪ್ಪ ಇವರ ಸ ನಂ 198/2 ವಿಸ್ತೀರ್ಣ 0.60 ಸೆಂಟ್ಸ್ ಹಾಗೂ ಎಂ ಚಂದ್ರಪ್ಪ ಸ ನಂ 193 ವಿಸ್ತೀರ್ಣ 3.00 ಎಕರೆ ಜಮೀನುಗಳಲ್ಲಿ ಬೆಳೆದ ಪಪ್ಪಾಯಿ ಬೆಳೆ ಭಾಗಶ: ಹಾಳಾಗಿರುತ್ತದೆ. ಈ ಬಗ್ಗೆ ಹರಪನಹಳ್ಳಿಯ ಸಹಾಯಕ ಆಯುಕ್ತರಾದ ಚಿದಾನಂದ .ಎಸ್. ಗುರುಸ್ವಾಮಿ ಇವರು ಕಂದಗಲ್ ಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಪಪ್ಪಾಯಿ ಬೆಳೆಯ ನಷ್ಟದ ಬಗ್ಗೆ ಮಾಹಿತಿಯನ್ನು ಪಡೆದರು. ಈ ಸಮಯದಲ್ಲಿ ಕೊಟ್ಟೂರು ತಹಶೀಲ್ದಾರರಾದ ಅಮರೇಶ್ ಜಿ ಕೆ, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಸೌಭಾಗ್ಯಮ್ಮ ಹಾಗೂ ಜಮೀನಿನ ರೈತರು ಸ್ಥಳದಲ್ಲಿ ಹಾಜರಿದ್ದರು.
- ಕರುನಾಡ ಕಂದ
