ಕಲ್ಬುರ್ಗಿ ವಿಭಾಗದ ಹೊಸ ತಾಲೂಕುಗಳಲ್ಲಿ ಹರ್ಷ
ಕಂಪ್ಲಿ ತಾಲೂಕಿಗೆ ಹೊಸ BEO ಕಚೇರಿ ಆರಂಭಕ್ಕೆ ಮುಹೂರ್ತ
ಬಳ್ಳಾರಿ / ಕಂಪ್ಲಿ : ಕಲಬುರಗಿ ವಿಭಾಗದ ಹೊಸ ತಾಲೂಕು ಕೇಂದ್ರಗಳಲ್ಲಿ ಬಿಇಓ ಕಚೇರಿ ಆರಂಭದ ಮುನ್ಸೂಚನೆ ಕಂಡುಬಂದಿರುವ ಹಿನ್ನೆಲೆ ಬಿ ಇ ಓ ಕಚೇರಿ ಆರಂಭದ ನಿರೀಕ್ಷೆಯಲ್ಲಿದ್ದ ತಾಲೂಕಿನ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲ್ಬುರ್ಗಿ ವಿಭಾಗ ವ್ಯಾಪ್ತಿಯ ಹೊಸ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಕ್ಕೆ ಆಯಾ ಜಿಲ್ಲೆಗಳಲ್ಲಿ ರಚಿಸಿರುವ ಸೃಜನ ಸಮಿತಿ ಸಭೆ ನಡೆಸಿ ಮೇ 3ರೊಳಗೆ ಕಚೇರಿಗೆ ಪ್ರಸ್ತಾವ ಸಲ್ಲಿಸುವಂತೆ ಕಲಬುರಗಿ ವಿಭಾಗದ ಅಪಾರ ಆಯುಕ್ತರು ಏಪ್ರಿಲ್ 25ರಂದು ಸುತ್ತೋಲೆ ಹೊರಡಿಸಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ಹೊಸ ತಾಲೂಕುಗಳಲ್ಲಿ ಬಿಇಒ ಕಚೇರಿ ಪ್ರಾರಂಭಕ್ಕಾಗಿ ಪೂರಕ ಪ್ರಕ್ರಿಯೆಯನ್ನು ಸಮಿತಿ ನಡೆಸಿದ್ದು ಏಪ್ರಿಲ್ 25 ರಿಂದ ಬಿಇಓ ಕಚೇರಿ ಆರಂಭವಾಗಲಿದೆ. ಕಮಲಾಪುರಕ್ಕೆ ಮಾತ್ರ ಬಿಇಓ ಕಚೇರಿ ಸೀಮಿತವಾಗಿರದೆ, ಕಲಬುರಗಿ ವಿಭಾಗದ ಎಲ್ಲಾ ಹೊಸ ಕಂದಾಯ ತಾಲೂಕುಗಳಲ್ಲಿ ಬಿಇಒ ಕಚೇರಿ ಆರಂಭಕ್ಕೆ ನಿಯಮನುಸಾರ ಕ್ರಮ ವಹಿಸಲು ಅಪಾರ ಆಯುಕ್ತರು ಮುಂದಾಗಿದ್ದಾರೆ.
ಸುತ್ತೋಲೆಯಲ್ಲಿ ಸೂಚನೆ : ಹೊಸ ತಾಲೂಕು ವ್ಯಾಪ್ತಿಗೆ ಒಳಪಡುವ ಕ್ಲಸ್ಟರಗಳು, ಶಾಲೆಗಳ ಪಟ್ಟಿ ಹೊಸ ಶೈಕ್ಷಣಿಕ ವಲಯ ಹೆಸರಿನಡಿ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು (ಆಡಳಿತ ವಿಭಾಗ) ಏಪ್ರಿಲ್ 29 ರ ಒಳಗೆ ಅಧಿಸೂಚನೆ ಹೊರಡಿಸಬೇಕು. ಹೊಸ ಬಿಇಓ ಕಚೇರಿಯಲ್ಲಿ ಹುದ್ದೆಗಳನ್ನು ಹೊಸದಾಗಿ ಸೃಜನ ಮಾಡದೆ ಸ್ಥಳಾಂತರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹುದ್ದೆಗಳನ್ನು ಸ್ಥಳಾಂತರಗೊಳಿಸುವ ಪ್ರಕ್ರಿಯೆ ನಡೆಸಲು ರಚನೆಯಾಗಿರುವ ಹೊಸ ಬಿಇಓ ಕಚೇರಿ ಸೃಜನ ಸಮಿತಿಗೆ ಜಿಲ್ಲಾ ಪಂಚಾಯಿತಿಯ ಸಿಇಒ ಅಧ್ಯಕ್ಷರಾಗಿ, ಡಿಡಿಪಿಐ ಕಾರ್ಯದರ್ಶಿಯಾಗಿ, ಡಯಟ್ ಪ್ರಾಂಶುಪಾಲರು ಸಂಬಂಧಿಸಿದ ಬಿಇಒ ಮಧ್ಯಾಹ್ನ ಉಪಹಾರ ಯೋಜನೆ ಜಿಲ್ಲಾ ಶಿಕ್ಷಣಾಧಿಕಾರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಸದಸ್ಯರಾಗಿದ್ದು, ಜಿಲ್ಲಾ ಪಂಚಾಯತ್ ಸಿಇಒ ಸೂಚನೆಯಂತೆ ನಡೆಸುವ ಸಭೆಯಲ್ಲಿ ಕಚೇರಿ ಆರಂಭದ ಪ್ರಕ್ರಿಯೆಯನ್ನು ಚರ್ಚೆ ಹುದ್ದೆಗಳ ಸ್ಥಳಾಂತರ ಕುರಿತು ಕೈಗೊಳ್ಳುವ ನಿರ್ಣಯದ ಪ್ರಸ್ತಾವನೆಯನ್ನು ಮೂರರೊಳಗೆ ಅಪಾರ ಆಯುಕ್ತ ಕಚೇರಿಗೆ ಸಲ್ಲಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅತೀ ಶೀಘ್ರದಲ್ಲೇ ಸೃಜನ ಸಮಿತಿ ಸಭೆ ಕರೆದು ಕಂಪ್ಲಿ ಬಿಇಒ ಕಚೇರಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
- ಹ್ಯಾರಿಸ್ ಸುಮೈರ್ ಎಂ. ಡಿ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಬಳ್ಳಾರಿ.
ಆದಷ್ಟು ಬೇಗನೆ ಸಭೆಯನ್ನು ಕರೆಯುವಂತೆ ಇದೇ ಶೈಕ್ಷಣಿಕ ಸಾಲಿನಲ್ಲಿ ಕಂಪ್ಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಪ್ರಾರಂಭಿಸುವಂತೆ ತಿಳಿಸುತ್ತೇನೆ
- ಜೆ. ಎನ್. ಗಣೇಶ.
ಶಾಸಕರು, ಕಂಪ್ಲಿ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು ಕರ್ನಾಟಕ ಕೈಮಗ್ಗ ನಿಗಮ ಮಂಡಳಿ.
ವರದಿ : ಜಿಲಾನಸಾಬ್ ಬಡಿಗೇರ್.
