- ಪ್ರೀತಿಯ ಇನಿಯ
ಎನ್ನ ಬಾಳೆಂಬ ಪಯಣದಿ
ಜೊತೆಗೆ ಚಿರಕಾಲ ಇರುವೆಯ
ಎನ್ನ ಮುಗುಳು ನಗೆಯ
ಕಾರಣ ನೀನಾಗುವೆಯ
ಕೈ ಹಿಡಿದು ನಡೆಯುವೆಯ
ಪ್ರೀತಿಯ ಜಗವ ತೋರಿಸುವೆಯ
ಕಾರಣವ ಕೊಟ್ಟು ದೂರ ಇರಸದಿರುವೆಯ
ಎನ್ನ ಪ್ರೀತಿಯ ಇನಿಯ
ನಮ್ಮಿಬ್ಬರ ಹೆಸರ ಇರಲಿ ಉಸಿರಿರುವ ತನಕ.
- ನಾನೆ ರಾಣಿ
ನಾನೆ ರಾಣಿ ಇರುವಾಗ ನನ್ನ ಲೋಕದಲ್ಲಿ
ಹೋಲಿಕೆ ಏಕೆ ಮಾಡಲಿ ಪರರಲ್ಲಿ
ಅವರ ಇವರ ನೋಡುತ್ತ ಕುಳಿತರೆ ಇಲ್ಲಿ
ಅರ್ಧ ಆಯುಷ್ಯ ಮುಗಿಯುವುದು ಜೀವನದಲ್ಲಿ
ಹೀಗೆ ಸುಮ್ಮನೆ ಬರೆದಿರುವೆ ನನ್ನದೆ ಶೈಲಿಯಲ್ಲಿ
ಮುದ್ರತವಾಗಬೇಕು ನನ್ನ ಹೆಸರು ಚರಿತ್ರೆಯಲ್ಲಿ.
- ನೀನೆಂದರೆ ಎನಗೆ
ಮುಂಜಾನೆಯ ಒಲವು ನೀನು
ನನ್ನ ಎದೆಯ ಬೆಳಕು ನೀನು
ಭಾವನೆಗೆ ಸಿಕ್ಕ ಪ್ರೀತಿ ನೀನು
ನನ್ನ ಓಷ್ಟ್ಯದ ಅಂಚಿನ ಕಿರುನಗೆ ನೀನು
ನನ್ನ ಹೃದಯದ ಮಾಯವಿ ನೀನು
ಏನು ಹೇಳಲಿ ನಾ ನೀನೆಂದರೆ ನನ್ನ ಪ್ರಪಂಚವೆಂದು.
- ಮುಂಜಾನೆಯ ಸೂರ್ಯ
ಹೂವಿನಂತೆ ಅರಳುವ ಸೂರ್ಯ
ಈ ಸೂರ್ಯನ ಕಿರಣಗಳ ಮೊದಲ ಸ್ಪರ್ಶ
ಇದನ್ನು ನೋಡುತ್ತಿದ್ದರೆ ಎನಗೆ ಹರ್ಷ ನೀನಿಲ್ಲದೆರೆ ಪ್ರಪಂಚವೇ ಕಗ್ಗತ್ತಲು ನೀ ಬಂದರೆ ಜಗತ್ತೇ ಬೆಳಕು.
- ಸೂರ್ಯನ ಪ್ರೀತಿ
ಸೂರ್ಯನನ್ನು ಸ್ವಾಗತಿಸಲು ಹಕ್ಕಿಗಳು ಹಾಡುತ್ತಿರಲು
ಆಗಸದ ತುಂಬೆಲ್ಲಾ ಬಣ್ಣ ಬಣ್ಣದ ರಂಗು ಚೆಲ್ಲಿರಲು
ಅವನ ಬರುವಿಕೆಯ ದಾರಿ ಕಾಯಲು
ನನ್ನ ಮನ ಮೀಡಿಯುತ್ತಿದೆ ಅವನನ್ನು ನೋಡಲು
ಬಂದಾಗ ನನ್ನ ಹೃದಯ ಡಬ್ ಡಬ್ ಎಂದು ಮೀಡಿಯಲು
ಆದರೂ ಎನ್ನ ಮೊಗದಲ್ಲಿ ಎಲ್ಲಿರದ ನಾಚಿಕೆ ಅರಳಿರಲು
ನನ್ನವನು ಹೇಗೆಂದರೆ
ತಂಪು ಇರುವನು – ಬಂದಾಗ ಹೋಗಿ ಬಾಚಿ ಅಪ್ಪಿಕೊಳ್ಳಲೆ ಎನ್ನುವ ಹಾಗೆ
ಕೆಂಪು ಆಗುವನು – ಸಮಯ ಸರಿದಾಗ ಸುಡುವ ಬೆಂಕಿಯ ಹಾಗೆ
ಇಂಪು ಆಗುವನು – ಹೋಗುವಾಗ ಇರುಳು ಮುಗಿಯದೆ ಇರಲಿ ಎನ್ನುವ ಹಾಗೆ
“ಆಂಜನೇಯನಿಗೆ ಸೂರ್ಯನನ್ನು ತಿನ್ನುವ ಹಂಬಲವಾದರೆ
ನನಗೆ ಅವನನ್ನು ಪ್ರೀತಿಸುವ ಹಂಬಲ”.
- ಮಾತಿಗೆ ಬೆಲೆ ಇಲ್ಲದಾಗ ಮೌನವೇ ಒಳ್ಳೆಯದು,
ಮನುಷ್ಯನಿಗೆ ಬೆಲೆ ಇಲ್ಲದಾಗ
ದೂರವಿರುವುದೇ ಒಳ್ಳೆಯದು. - ಕಾಣದ ದಾರಿಯಲ್ಲಿ ನಿನ್ನವರನ್ನು ಹುಡುಕ ಬೇಡ ನಿನ್ನ ದಾರಿಯಲ್ಲಿ ನಿನಗಾಗಿ ಬಂದವರನ್ನು ಕಳೆದುಕೊಳ್ಳಬೇಡ.
- ಅಪ್ಪ ಇಲ್ಲಾಂದ್ರೆ ಹರಿದಿರೋ ಬಟ್ಟೆ,
ಅಮ್ಮ ಇಲ್ಲಾಂದ್ರೆ ಹಸಿದಿರೋ ಹೊಟ್ಟೆ ಶಿಕ್ಷಕರು ಇಲ್ಲ ಅಂದ್ರೆ ಜೀವನ ಮೂರಾಬಟ್ಟೆ. - ಅಮ್ಮ ನೀ ನನ್ನ ಎದೆ ಬಡಿತ ಉಸಿರಲ್ಲಿ ಉಸಿರಾಗಿ ನಿನ್ನ ರಕ್ತದ ಹನಿಯಾಗಿ ನಿನ್ನ ಉಸಿರಿನಿಂದ ನಾ ಹೆಸರು ಮಾಡುವೆ ನಗುನಗುತ್ತಾ ಅಮ್ಮ.
- ಮನಸ್ಸು ತುಂಬಾ ಒಳ್ಳೆ ಯೋಚನೆ ಇರಲಿ ಮುಖದ ತುಂಬಾ ಒಳ್ಳೆಯ ನಗುವಿರಲಿ ತುಂಬಾ ಒಳ್ಳೆಯ ಕೆಲಸವಿರಲಿ ಜೇಬಿನ ತುಂಬಾ ಬಹಳ ದುಡ್ಡಿರಲಿ ಆದರೆ ನನ್ನ ಜೀವನದ ತುಂಬಾ ಶಿಕ್ಷಕರು ಹೇಳಿದ ಪಾಠ ಸದಾ ತುಂಬಿರಲಿ.

ಕವಯತ್ರಿ : ಎಂ. ಲಕ್ಷ್ಮಿ, ಕಂಪ್ಲಿ.
