ಬಳ್ಳಾರಿ / ಕುರುಗೋಡು : ಕುರುಗೋಡು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಐ.ಇ.ಸಿ. ಘನ ತ್ಯಾಜ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ವಿವಿಧ ಬಗೆಯ ಐ.ಇ.ಸಿ. ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯ ಗುಂಪುಗಳ ಸದಸ್ಯರಗಳ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ : 10ನೇ ತರಗತಿ/ ತತ್ಸಮಾನ ಶಿಕ್ಷಣ ಹೊಂದಿರತಕ್ಕದ್ದು, ಅಭ್ಯರ್ಥಿಯು ಕನ್ನಡ ಮಾತನಾಡಲು ಹಾಗೂ ಬರೆಯಲು ತಿಳಿದಿರಬೇಕು. ಅರ್ಜಿಸಲ್ಲಿಸುವವರು ಸ್ವ- ಸಹಾಯ ಗುಂಪಿನಲ್ಲಿ ಕಾರ್ಯ ನಿರ್ವಹಿಸಿರುವ ಬಗ್ಗೆ ಸಲ್ಮ್/ ಭಾರತ/ಕರ್ನಾಟಕ ಸರ್ಕಾರದಿಂದ ಸೂಕ್ತ ದಾಖಲೆ ಹೊಂದಿರಬೇಕು.
ಕಂಪ್ಯೂಟರ್ ಸಾಕ್ಷರತೆಯ ಎಂ. ಎಸ್. ಆಫೀಸ್, ಎಂ ಎಸ್ ಎಕ್ಸೆಲ್, ನಿರ್ವಹಿಸುವ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪರಿಣಿತರಾಗಿರಬೇಕು. ಮಾಹಿತಿ ಶಿಕ್ಷಣ ಮತ್ತು ಸಂವಹನದಡಿ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವುಳ್ಳ ಅಭ್ಯರ್ಥಿಗಳಿಗೆ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುವುದು.
ಈ ಮೇಲಿನ ಎಲ್ಲಾ ದಾಖಲೆ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿದ್ದಲ್ಲಿ ಕುರುಗೋಡು ಪುರಸಭೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಮೇ 4 ರ ಬೆಳಿಗ್ಗೆ 8 : 00 ಗಂಟೆಯಿಂದ ಮಧ್ಯಾಹ್ನ 1 : 30 ರ ವರೆಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಮುಖ್ಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್.
