
ವಿಜಯನಗರ / ಹೊಸಪೇಟೆ : ನಗರದ ಚಿತ್ತವಾಡಗಿಯ ಅತ್ಯುತ್ತಮ ಸಂಘಟನಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಸಂಗೀತ ಭಾರತಿ ವಿಜಯನಗರ ಜಿಲ್ಲಾ ಅದ್ವೈತ ಮಹಾಸಭಾ ವತಿಯಿಂದ 34ನೇ ವರ್ಷದ ಶಂಕರ ತತ್ವ 400ನೇ ಮಾಸಿಕ ಚಿಂತನ ಸಂಭ್ರಮ ಏಪ್ರಿಲ್ 27ರಂದು ಸಂಜೆ 6 ಗಂಟೆಗೆ ನಗರದ ಹೋಟೆಲ್ ಮಲ್ಲಿಗೆ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಗೀತ ಭಾರತೀಯ ಸಂಸ್ಥಾಪಕ ಎಚ್. ಪಿ. ಕಲ್ಲಂಭಟ್ ತಿಳಿಸಿದ್ದಾರೆ.

400ನೇ ವಿಶೇಷ ಮಾಸಿಕ ಚಿಂತನದಲ್ಲಿ ಜನಪ್ರಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ ಬೆಂಗಳೂರಿನ ವಿದುಷಿ ಸ್ಮಿತಾ ದೇವಸಿಂಹ, ಜನಪ್ರಿಯ ಮೃದಂಗ ಮತ್ತು ಘಟ ವಾದ್ಯಗಾರರಾದ ಬೆಂಗಳೂರಿನ ವಿದ್ವಾನ್ ಎನ್. ಎಸ್. ಕೃಷ್ಣಪ್ರಸಾದ್ , ಸಮಾಜ ಸೇವಕ ಮಂಜುನಾಥ್ ಕಲಾಲ್ , G. ರೆಹಮಾನ್ ಸೇರಿದಂತೆ 15 ಜನ ಬಹುಮುಖ ಪ್ರತಿಭೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ
ಸಂಜೆ ಸುರೇಶ ಸೌಂಡ್ಸ್ ವತಿಯಿಂದ ಹಳೆಯ ಕನ್ನಡ ಚಿತ್ರಗಳು. ಸಂಜೆ 6ಕ್ಕೆ ನಾಟ್ಯ ನಾದ ಕಲಾ ಕುಟೀರದಿಂದ ಭರತನಾಟ್ಯ ಸಂಭ್ರಮ 6 : 15ಕ್ಕೆ ಶಂಕರ ತತ್ವ ಚಿಂತನೆ ಸಂಜೆ 6:20ಕ್ಕೆ 400 ಸಂಭ್ರಮದ ಅನಿಸಿಕೆ ಸಂಜೆ 7:15ಕ್ಕೆ 34ನೇ ವರ್ಷದ ಚಿಂತನ ಸಂಭ್ರಮದಲ್ಲಿ ರಾಜ್ಯಮಟ್ಟದ ವಿಶೇಷ ಪ್ರಶಸ್ತಿ ಅಭಿನಂದನ ಸಮಾರಂಭ ಜರಗಲಿದೆ ಸರ್ವರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್.
