
ಯಾದಗಿರಿ/ ಗುರುಮಠಕಲ್: ಬಹು ದಿನಗಳ ಬೇಡಿಕೆ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೊನೆಗೂ ಈಡೇರುವ ಕಾಲ ಕೂಡಿ ಬಂದಿದೆ, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಹೊಸದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭವಾಗಿರುವ ಹಿನ್ನಲೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭಿಸುವ ಉದ್ದೇಶದಿಂದ ಯಾದಗಿರಿ ಜಿಲ್ಲೆಯ ಮಾನ್ಯ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ್ ರವರು ಗುರುಮಠಕಲ್ ನಗರದ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆ ವೀಕ್ಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾಡಲು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು. ತಾಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅವಶ್ಯಕತೆ ಇದ್ದು, ಕಾರ್ಯಾಲಯಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯವನ್ನು ಪರಿಶೀಲನೆ ಕಾರ್ಯ ನಡೆದಿದೆ, ಶೀಘ್ರದಲ್ಲಿಯೇ ಪ್ರಾರಂಭವಾಗುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕರಾದ ಹನುಮಂತ, ಶಿಕ್ಷಣ ಸಂಯೋಜಕರಾದ ರವೀಂದ್ರ, ಬಾಲಪ್ಪ ಸಮೂಹ ಸಂಪನ್ಮೂಲ ವ್ಯಕ್ತಿ(CRP), ಸೈಯದ್ ಬಾಬಾ CRP, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ನಾರಾಯಣ ರೆಡ್ಡಿ,
ಮುಖ್ಯ ಗುರುಗಳಾದ ಹನುಮಂತ್ ರಾವ್ ರಾಮುಲು, ಶ್ರೀಮತಿ ಹೇಮಲತಾ, ಸಂಪತ್ ಕುಮಾರ್ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್
