
ಬಳ್ಳಾರಿ/ ಕಂಪ್ಲಿ :
ಸೋಮಪ್ಪ ಕೆರೆ ದಡದಲ್ಲಿರುವ ಕೆರೆಕಟ್ಟೆ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ವಿವಾಹ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಸ್ಥಳೀಯ ಐತಿಹಾಸಿಕ ಸೋಮಪ್ಪ ಕೆರೆ ದಡದಲ್ಲಿರುವ ಶ್ರೀ ಕೆರೆಕಟ್ಟೆ ಸವದತ್ತಿ ಯಲ್ಲಮ್ಮ ದೇವಿ ಸನ್ನಿಧಾನದಲ್ಲಿ ಅಶ್ವತ್ಥ ವೃಕ್ಷ ಮತ್ತು ಬೇವಿನ ವೃಕ್ಷದ ನಡುವೆ ವಿವಾಹ ಮಹೋತ್ಸವದ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಶ್ರದ್ಧಾಭಕ್ತಿಯಿಂದ ಜರುಗಿದವು.
ಇಲ್ಲಿನ ದೇವಸ್ಥಾನದಲ್ಲಿ ಈರಣ್ಣ ಪುರೋಹಿತ್ಯದಲ್ಲಿ ಅಶ್ವತ್ ವೃಕ್ಷ ಮತ್ತು ಬೇವಿನ ವೃಕ್ಷದ ನಡುವೆ ಅದ್ಧೂರಿಯಾಗಿ ವಿವಾಹ ಮಾಡಲಾಯಿತು. ಹೋಮ ಹವನ, ಅಭಿಷೇಕ ಸೇರಿ ನಾನಾ ಧಾರ್ಮಿಕ ಕೈಂಕಾರ್ಯಗಳು ನೆರವೇರಿದವು. ಇಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಸಾಕಷ್ಟು ಭಕ್ತರು ದೇವಿ ಸನ್ನಿಧಾನಕ್ಕೆ ಆಗಮಿಸಿ, ಕಾಯಿ, ಕರ್ಪೂರ ಅರ್ಪಿಸಿ, ದೇವಿಯ ಕೃಪೆಗೆ ಪಾತ್ರರಾದರು. ನಂತರ ಅನ್ನ ಸಂತಾರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
